ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಹುಣಸೂರಿನ ವೀರನ ಹೊಸಹಳ್ಳಿಯಿಂದ ಗಜಪಡೆಯ ಪಯಣ ಇಂದು ಪ್ರಾರಂಭವಾಯಿತು.
ಮಂತ್ರಿಗಳು, ಜನಪ್ರತಿನಿಧಿಗಳು ಬರಲು ಉತ್ತಮವಾದ ರಸ್ತೆಗಳನ್ನು ಮಾಡಲಾಗಿತ್ತು. ಆದರೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸಿರಲಿಲ್ಲ.
ಗಜ ಪಯಣಕ್ಕೆ ವೀರನ ಹೊಸಹಳ್ಳಿ ಹೆಬ್ಬಾಗಿಲಿನಲ್ಲಿ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುತ್ತಮುತ್ತಲ ಭೂಮಿ ಕೆಸರು ಗದ್ದೆಯಂತಾಗಿದೆ.
ಸಿಬ್ಬಂದಿಗಳ ವಾಹನ, ಪೊಲೀಸರ ವಾಹನ ಸೇರಿದಂತೆ ಪತ್ರಕರ್ತರ ವಾಹನಗಳಿಗೂ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿರಲಿಲ್ಲ. ಹಾಗಾಗಿ ಎಷ್ಟೋ ವಾಹನಗಳು ಕೆಸರು ಗದ್ದೆಯಂತಾಗಿದ್ದ ಭೂಮಿಯಲ್ಲಿ ಕೂತುಕೊಳ್ಳುವಂತಾಗಿತ್ತು.
ನೂರಾರು ಮಂದಿ ಜನರು ಗಜ ಪಯಣವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದರು, ಆದರೆ ಸರಿಯಾದ ರಸ್ತೆ ಇಲ್ಲದೆ ಕುಳಿತುಕೊಳ್ಳಲು ಆಗದೆ ಕೆಸರು ಮಾಯವಾದ ಮಣ್ಣಿನಲ್ಲಿ ನಿಂತು ಮಕ್ಕಳೊಂದಿಗೆ ಎದ್ದು, ಬಿದ್ದು ಗಜ ಪಯಣ ಕಣ್ತುಂಬಿಕೊಂಡರು. ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ನಾಚಿಕೆ ಆಗಬೇಡವೇ ಎಂದು ಜನ ಬೈದುಕೊಳ್ಳುತ್ತಿದ್ದಿದ್ದು ಕಂಡುಬಂದಿತು

ಸರ್ಕಾರ ಗಜ ಪಯಣದ ಸಿದ್ಧತೆಗಾಗಿಯೇ ಕೋಟಿಗೂ ಹೆಚ್ಚು ಹಣ ನೀಡುತ್ತದೆ. ಆದರೆ ಜಿಲ್ಲಾಡಳಿತ, ತಾಲೂಕು ಆಡಳಿತ ಕೆಸರು ಗದ್ದೆಯಲ್ಲಿ ಜನ ಓಡಾಡುವಂತೆ ಮಾಡಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ವಿಷಯದಲ್ಲೂ ಗೋಲ್ ಮಾಲ್ ಮಾಡಿ ಹಣ ಹೊಡೆಯುವುದೇ ಕಾಯಕವಾಗಿಬಿಟ್ಟಿದೆ ಎಂದು ಚಲುವರಾಜು ಕಿಡಿ ಕಾರಿದ್ದಾರೆ.