ಅಪ್ರಾಪ್ತ ಕ್ರೀಡಾಪಟು ಮೇಲೆ ಐದು ವರ್ಷಗಳಿಂದ 60 ಮಂದಿಯಿಂದ ಲೈಂಗಿಕ ದೌರ್ಜನ್ಯ

ಕೇರಳ: ಅಪ್ರಾಪ್ತ ಕ್ರೀಡಾಪಟು ಮೇಲೆ 5 ವರ್ಷಗಳಿಂದ 60ಕ್ಕೂ ಹೆಚ್ಚು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ನಡೆಸಿರುವ ಆಘಾತಕಾರಿ ಘಟನೆ ಕೇರಳದ ಪಥನಾಂತಿಟ್ಟದಲ್ಲಿ ನಡೆದಿದೆ.

18 ವರ್ಷದ ಯುವತಿಯೊಬ್ಬಳು ತನ್ನ ಮೇಲೆ ಕಳೆದ ಐದು ವರ್ಷಗಳಲ್ಲಿ 60ಕ್ಕೂ ಹೆಚ್ಚು ಜನರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದಾಳೆ.

ಕ್ರೀಡಾಪಟು ಯುವತಿ ತನ್ನ ಕೋಚ್​ಗಳು, ಸಹಪಾಠಿಗಳು ಸೇರಿದಂತೆ 64 ಜನ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿದ್ದಾಳೆ. ಆರೋಪಿಗಳ ಫೋನ್‌ಗಳಿಂದ ವಶಪಡಿಸಿಕೊಂಡ ಫೋಟೋಗಳಿಂದ 15 ಜನರನ್ನು ಬಂಧಿಸಲಾಗಿದೆ, 40 ಆರೋಪಿಗಳನ್ನು ಯುವತಿ ಗುರುತಿಸಿದ್ದಾಳೆ.

ಯುವತಿ ನೀಡಿದ ದೂರಿನ ಮೇರೆಗೆ ಕೇರಳ ಪೊಲೀಸರು ಆಕೆಯ ಸಹಪಾಠಿಗಳು ಮತ್ತು ಆಕೆಯ ತರಬೇತುದಾರರು ಸೇರಿದಂತೆ 64 ವ್ಯಕ್ತಿಗಳ ವಿರುದ್ಧ 4 ಎಫ್​ಐಆರ್​ ದಾಖಲಿಸಿದ್ದಾರೆ.

5 ವರ್ಷಕ್ಕಿಂತ ಹೆಚ್ಚು ವರ್ಷಗಳಿಂದ ಕೋಚ್​ಗಳಿಂದ ಹಾಗೂ ಸ್ವಿಮ್ಮಿಂಗ್ ಕ್ಲಾಸ್​ಗೆ ಬರುತ್ತಿದ್ದವರಿಂದ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಆಕೆ ಹೇಳಿದ್ದಾಳೆ.

ಪೊಲೀಸರ ಪ್ರಕಾರ, ಅಪ್ರಾಪ್ತ ಯುವತಿ ಹೇಳಿದಂತೆ 60ಕ್ಕೂ ಹೆಚ್ಚು ಆರೋಪಿಗಳಿದ್ದಾರೆ ಈ ಪ್ರಕರಣದ ಐವರು ಆರೋಪಿಗಳು ಪಥನಾಂತಿಟ್ಟ ನಿವಾಸಿಗಳಾಗಿದ್ದಾರೆ.

ಆಕೆಯ ತರಬೇತುದಾರರು, ಸಹ ಕ್ರೀಡಾಪಟುಗಳು ಮತ್ತು ಸಹಪಾಠಿಗಳು ಸೇರಿದಂತೆ ಹಲವು ವ್ಯಕ್ತಿಗಳು ಆ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬುದಕ್ಕೆ ಪುರಾವೆಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪಥನಾಂತಿಟ್ಟದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪಥನಾಂತಿಟ್ಟ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಪಥನಾಂತಿಟ್ಟ ಜಿಲ್ಲೆಯ ಹೊರಗಿನ ವ್ಯಕ್ತಿಗಳು ಸಹ ಈ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಹೇಳಿದೆ.

ಸಿಡಬ್ಲ್ಯೂಸಿ ಅಧ್ಯಕ್ಷರ ಪ್ರಕಾರ, ಆ ಹುಡುಗಿಗೆ 13ನೇ ವಯಸ್ಸಾದಾಗಿನಿಂದಲೂ ಆಕೆ ಲೈಂಗಿಕ ಶೋಷಣೆಗೆ ಬಲಿಯಾಗಿದ್ದಾಳೆ. ಇದು ಅಸಾಮಾನ್ಯ ಪ್ರಕರಣವಾದ್ದರಿಂದ, ಹೆಚ್ಚಿನ ಸಮಾಲೋಚನೆಗಾಗಿ ಅವಳನ್ನು ಮನಶ್ಶಾಸ್ತ್ರಜ್ಞರ ಬಳಿಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದ್ದಾರೆ.