ರಾಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾಗಿ ಕೆಂಗೇಗೌಡ ಆಯ್ಕೆ: ಅಭಿನಂದನೆ

Spread the love

ಮೈಸೂರು: ವಿದ್ಯಾರಣ್ಯಪುರಂನಲ್ಲಿರುವ 85 ವರ್ಷದ ಹಳೆಯ ಪುರಾತನ ರಾಮಲಿಂಗೇಶ್ವರ ದೇವಸ್ಥಾನದ ನೂತನ ಅಧ್ಯಕ್ಷರಾಗಿ ಕೆಂಗೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ನಿವೃತ್ತ ಸಹಾಯಕ ಕಂದಾಯ ಅಧಿಕಾರಿ ಕೆಂಗೇಗೌಡ ಅವರಿಗೆ ಅಪೂರ್ವ ಸ್ನೇಹ ಬಳಗ ಹಾಗೂ ಹಿತೈಷಿಗಳು ಸನ್ಮಾನಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಸೊಸೈಟಿ ಆನಂದ್, ವಾಸು, ಪೈಲ್ವಾನ್ ಕೆ ಕೆಂಪೇಗೌಡ, ರಾಮಣ್ಣ,ವಿಜಯ್ ಕುಮಾರ್, ಬಸವರಾಜಪ್ಪ ,ನಂಜಪ್ಪ, ಸಂದೇಶ್, ಶಿವಪ್ರಕಾಶ್, ಹೇಮಾ ಶೆಟ್ಟಿ ಮತ್ತಿತರರು ಶುಭಕೋರಿದರು.