ದೇಶ ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ ಕೆಂಗಲ ಹನುಮಂತಯ್ಯ:ಶ್ರೀವತ್ಸ

Spread the love

ಮೈಸೂರು: ಕೆಂಗಲ್ ಹನುಮಂತಯ್ಯ ನವವರು ನಾಡು, ದೇಶ ಕಂಡ ಶ್ರೇಷ್ಠ ಅಪರೂಪದ ಮುತ್ಸದ್ದಿ ರಾಜಕಾರಣಿ ಎಂದು ಶಾಸಕ ಟಿ.ಎಸ್.‌ಶ್ರೀವತ್ಸ ಬಣ್ಣಿಸಿದರು.

ಕರ್ನಾಟಕ ಸೇನಾ ಪಡೆ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸ್ವತಂತ್ರ ಭಾರತದ ಮುತ್ಸದ್ದಿ, ಧೀಮಂತ ರಾಜಕಾರಣಿ, ಕರ್ನಾಟಕ ಏಕೀಕರಣದ ರೂವಾರಿ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ 117 ನೇ ಜಯಂತಿ ಕಾರ್ಯಕ್ರಮದಲ್ಲಿ ಕೆಂಗಲ್ ಹನುಮಂತಯ್ಯ ನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕರ್ನಾಟಕದ ಏಕೀಕರಣವು ಕೆಂಗಲ್ಲರ ಮಹಾನ್ ಸಾಧನೆ,ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ನುಡಿದರು.

ಅವರು ವಿಧಾನ ಸೌಧ ನಿರ್ಮಾಣ ಮಾಡಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಾಮಫಲಕ ಹಾಕಿದ್ದರು. ಕೇಂದ್ರ ರೈಲ್ವೆ ಮಂತ್ರಿಗಳಾಗಿಯೂ ಸಹ ಕರ್ನಾಟಕಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲಾ ರಾಜಕಾರಣಿಗಳೂ ನಾವೆಲ್ಲರೂ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿ ಕೊಳ್ಳಬೇಕು, ಇಂತಹ ಮಹನೀಯರ ಜಯಂತಿ ಆಚರಣೆ ಶ್ಲಾಘನೀಯ ಎಂದು ಶ್ರೀವತ್ಸ ತಿಳಿಸಿದರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ಆಗಿನ ಹಳೇ ಮೈಸೂರು ರಾಜ್ಯ ಒಕ್ಕಲಿಗರ ಪ್ರಾಬಲ್ಯ ಹೊಂದಿತ್ತು. ಏಕೀಕರಣ ಆದರೆ ಒಕ್ಕಲಿಗರ ಪ್ರಾಬಲ್ಯ ಹಾಗೂ ಮುಖ್ಯ ಮಂತ್ರಿ ಪದವಿ ಹೋಗುತ್ತದೆ ಎಂದು ಎಲ್ಲಾ ಮುಖಂಡರು ಹೇಳಿ ವಿರೋಧ ಮಾಡಿದರೂ ಕೆಂಗಲ್ ಹನುಮಂತಯ್ಯನವರು ಅದ್ಯಾವುದಕ್ಕೂ ಮಣಿಯದೆ ಅಖಂಡ ಕರ್ನಾಟಕ ಆಗಲೇಬೇಕು ಎಂದು ಏಕೀಕರಣ ಬೆಂಬಲಿಸಿ ತಮ್ಮ ಮುಖ್ಯಮಂತ್ರಿ ಪದವಿ ಯನ್ನೇ ಕಳೆದುಕೊಂಡ ಮಹಾನ್ ನಾಯಕ ಎಂದು ಕೊಂಡಾಡಿದರು.

ನಮ್ಮ ಭಾರತದಲ್ಲೇ ಎಲ್ಲೂ ಇಲ್ಲದಂತ ವಿಶ್ವ ಪ್ರಸಿದ್ಧ ವಿಧಾನ ಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಹುಟ್ಟು ಹಬ್ಬವನ್ನು ಮುಂದಿನ ವರ್ಷದಿಂದ ಸರ್ಕಾರದ ವತಿಯಿಂದ ಆಚರಣೆ ಮಾಡಬೇಕೆಂದು ಒತ್ತಾಯಿಸಿದರು.

ನೆರೆದಿದ್ದ ಜನರಿಗೆ ಹಿರಿಯ ಸಂಸ್ಕೃತಿ ಪೋಷಕರಾದ ಡಾ.ರಘುರಾಂ ಕೆ ವಾಜಪೇಯಿ ಅವರು ಸಿಹಿ ವಿತರಿಸಿದರು.

ನಂತರ ಮಾತನಾಡಿದ ಅವರು ಕೆಂಗಲ್ ಹನುಮಂತಯ್ಯ ಅವರು ದೇಶ ಕಂಡ ಪ್ರಾಮಾಣಿಕ ರಾಜಕಾರಣಿ, ಭವ್ಯವಾದ ವಿಧಾನಸೌಧವನ್ನು ಕಟ್ಟುವಾಗ ಕಟ್ಟಡದ ಇಂಜಿನಿಯರ್ ನ್ನು ಕೆಂಗಲ್ ಹನುಮಂತಯ್ಯನ ಸನ್ನಿಧಾನಕ್ಕೆ ಕರೆಸಿ ಹಾಲಿನ ಅಭಿಷೇಕ ಮಾಡಿಸಿ, ಆ ಹಾಲಿನ ಮೇಲೆ ಕೈ ಇಡಿಸಿ ನಾನು ಈ ವಿಧಾನಸೌಧವನ್ನು ಕಟ್ಟುವಾಗ ಪ್ರಾಮಾಣಿಕವಾಗಿ ಕಟ್ಟುತ್ತೇನೆ ಒಂದು ಪೈಸೆ ಹಣ ಮುಟ್ಟುವುದಿಲ್ಲ ಎಂದು ಪ್ರಮಾಣ ಮಾಡಿಸಿ ವಿಧಾನ ಸೌಧ ಕಟ್ಟಿಸಿದ ಮಹಾನ್ ಪುರುಷರು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್, ಗೋವಿಂದೇಗೌಡ, ಸಿ ಹೆಚ್ ಕೃಷ್ಣಯ್ಯ, ಪ್ರಭುಶಂಕರ್, ಶಿವಲಿಂಗಯ್ಯ, ನೇಹಾ, ವಿಜಯೇಂದ್ರ, ರಾಮಣ್ಣ, ಪ್ರಭಾಕರ, ಮೊಗಣ್ಣಾಚಾರ್, ಕುಮಾರ್ ಗೌಡ, ಸುಬ್ಬೇಗೌಡ, ಮಹದೇವಸ್ವಾಮಿ, ದರ್ಶನ್ ಗೌಡ, ಪದ್ಮ, ಸಿಂದುವಳ್ಳಿ ಶಿವಕುಮಾರ್, ಅಕ್ಬರ್, ರಾಮಕೃಷ್ಣೇಗೌಡ, ಲಕ್ಷ್ಮೇ ಗೌಡ, ಹನುಮಂತಯ್ಯ, ಜ್ಯೋತಿ, ಬಸವರಾಜು, ಗಣೇಶ್ ಪ್ರಸಾದ್, ವಿಷ್ಣು ಮುಂತಾದವರು ಉಪಸ್ಥಿತರಿದ್ದರು.