ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಪದಗ್ರಹಣ ಹಾಗೂ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ವತಿಯಿಂದ ಕೃತಜ್ಞತೆ ಸಭೆ ಹಮ್ಮಿಕೊಳ್ಳಲಾಯಿತು.
ಈ ವೇಳೆ ರಾಜ್ಯಾಧ್ಯಕ್ಷ ಸಿ. ಜಿ. ಗಂಗಾಧರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರಿನ ಯುವರಾಜ ಕಾಲೇಜ್ ನಲ್ಲಿ ಮೈಕ್ರೋ ಬಯೋಲಾಜಿ ವ್ಯಾಸಂಗ ಮಾಡುತ್ತಿರುವ ಒಕ್ಕಲಿಗ ಸಮುದಾಯದ ತಂದೆ ಮತ್ತು ತಾಯಿ ಯನ್ನು ಕಳೆದುಕೊಂಡ ಪ್ರಿಯಾಪಟ್ಟಣದ ತನುಶ್ರೀ ವಿದ್ಯಾರ್ಥಿನಿಗೆ 50,000 ರೂ ದೇಣಿಗೆಯನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಕಾಲೇಜಿನ ಶುಲ್ಕ ಕಟ್ಟಲು ಸಂಘದ ಗೌರವಧ್ಯಕ್ಷ ಸಿ. ವೈ ಶಿವೇಗೌಡರು ವೈಯಕ್ತಿಕವಾಗಿ ಹತ್ತು ಸಾವಿರ ನಗದು ಮತ್ತು ಡ್ರೆಸ್ ತಗೆದುಕೊಳ್ಳುಲು ಐದು ಸಾವಿರ ನೀಡಿದರು.
ಮತ್ತು ಅಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರು ವಿದ್ಯಾರ್ಥಿನಿಗೆ ನೆರವು ನೀಡಿದರು,ಧನ ಸಹಾಯ ನೀಡಿ ಸಹಕರಿಸಿದ ಎಲ್ಲರಿಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಧನ್ಯವಾದ ಸಲ್ಲಿಸಿದ್ದಾರೆ.