ಕಾತ್ಯಾಯಿನಿದೇವಿ ಅಲಂಕಾರದಲ್ಲಿ ದೇವಿ ಪಾರ್ವತಿ

Spread the love

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ‌ದ ನವಗ್ರಹ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ತಾಯಿ ಪಾರ್ವತಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ.

ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ‌‌ ನವರಾತ್ರಿಯ ವಿಶೇಷ ಪೂಜಾಕಾರ್ಯಗಳು ನೆರವೇರಿಸಲಾಗುತ್ತಿದೆ.

ಶಿವಾರ್ಚಕರಾದ‌ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ಪ್ರತಿದಿನ ತಾಯಿ ಪಾರ್ವತಿಗೆ ವಿಶೇಷ ಅಲಂಕಾರಗಳನ್ನು ಮಾಡುತ್ತಿದ್ದಾರೆ.

ನವರಾತ್ರಿ ಆರನೆ ದಿನವಾದ ಶನಿವಾರ ತಾಯಿ ಕಾತ್ಯಾಯಿನಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.ಅಷ್ಟು ಸುಂದರವಾಗಿ ಅಲಂಕಾರ ಮಾಡಿದ್ದಾರೆ ಅಭಿನಂದನ್.

ದೇವಿಯು ಹಳದಿ ಬಣ್ಣ‌ ಮತ್ತು ಕಪ್ಪು ಪಟ್ಟಿ ಕೆಂಪು‌ ಬಾರ್ಡರ್ ನಿಂದ ಅಲಂಕರಿಸಲಾಗಿದ್ದು ಸೌಂದರ್ಯ ಮಾತೆಯಂತೆ ಕಾಣುತ್ತಿದ್ದಾಳೆ. ತಾಯಿ ಪಾರ್ವತಿಗೆ‌ ಮಲ್ಲಿಗೆ,ಸೇವಂತಿಗೆ,ಗುಲಾಬಿ ಹೂಗಳಿಂದ ಅಲಂಕರಿಸಲಾಗಿದೆ ತುಳಸಿ ಮತ್ತು ಬೆಳ್ಳಿಯ ಕವಚಗಳಿಂದ ಸುಂದರಗೊಳಿಸಲಾಗಿದೆ.

ಜತೆಗೆ ಬೆಳ್ಳಿಯ ಕೈಗಳು ಮತ್ತು ತ್ರಿಶೂಲಧಾರಿಯಾಗಿ ಮನಸಿಗೆ ಮುದ ನೀಡುತ್ತಿರುವಂತೆ ಕಾಣುತ್ತಾಳೆ.ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಮಂಗಳಾರತಿ ತೆಗೆದುಕೊಂಡು ಪ್ರಸಾದ ಸ್ವೀಕರಿಸಿದರು.