ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆಎಂ.ಮರಿಸ್ವಾಮಿ ಆಯ್ಕೆ

Spread the love

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ವಾರ್ತಾಭಾರತಿ ಪತ್ರಿಕೆ ತಾಲೂಕು ವರದಿಗಾರ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ಮರಿಸ್ವಾಮಿ ಆಯ್ಕೆಗೊಂಡಿದ್ದಾರೆ.

ತಾಲ್ಲೂಕು ಸಂಘದಿಂದ ಕೊಡಮಾಡುವ ಪ್ರಶಸ್ತಿಗೆ ಪತ್ರಕರ್ತರಾದ ಎನ್.ಸುರೇಶ್, ಚಿಕ್ಕಮಾಳಿಗೆ, ಎನ್.ನಟರಾಜು, ಪಿ.ಜಗದೀಶ್ ಅವರು ಆಯ್ಕೆಗೊಂಡಿದ್ದಾರೆ.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಪಿಡಬ್ಲ್ಯೂಡಿ ಅತಿಥಿಗೃಹದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ವಾರ್ಷಿಕ ಪ್ರಶಸ್ತಿಗೆ ಪತ್ರಕರ್ತರನ್ನು ಆಯ್ಕೆ ಮಾಡುವ ಸಂಬಂಧ ತುರ್ತು ಸಭೆಯನ್ನು ಕರೆಯಲಾಗಿತ್ತು.

ಸಭೆಯು ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ ಮತ್ತು ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಗೂಳಿಪುರ ನಂದೀಶ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ವೇಳೆ ವರದಿಗಾರ ಎಂ.ಮರಿಸ್ವಾಮಿ ಅವರು ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಆಯ್ಕೆಗೊಂಡರು.

ಜು.20 ರಂದು ಚಾಮರಾಜನಗರ ವರ್ತಕರ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಇವರನ್ನೊಳಗೊಂಡಂತೆ ಚಾಮರಾಜನಗರ ಜಿಲ್ಲೆಯ ಐದು ತಾಲೂಕಿನಿಂದಲೂ ತಲಾ ಒಬ್ಬ ಪತ್ರಕರ್ತರನ್ನು ಜಿಲ್ಲಾ ಸಂಘ ಸನ್ಮಾನಿಸಿ ಗೌರವಿಸಲಿದೆ.

ಜುಲೈ ಕೊನೆ ವಾರದಲ್ಲಿ ಕೊಳ್ಳೇಗಾಲ ತಾಲ್ಲೂಕು ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ಕೊಡಮಾಡುವ ತಾಲೂಕು ವಾರ್ಷಿಕ ಪ್ರಶಸ್ತಿಗೆ ನಿಂಪುವಾರ್ತೆ ಪತ್ರಿಕೆಯ ಎನ್.ಸುರೇಶ್, ಪ್ರತಿನಿಧಿ ಪತ್ರಿಕೆಯ ಚಿಕ್ಕಮಾಳಿಗೆ, ರಣಕಹಳೆ ಪತ್ರಿಕೆಯ  ಎನ್.ನಟರಾಜು, ನಿಜದನಿ ಪತ್ರಿಕೆಯ ಪಿ.ಜಗದೀಶ್ ಅವರು ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ಡಿ.ನಟರಾಜು, ತಾಲೂಕು ಸಂಘದ ಅಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್, ಸದಸ್ಯರಾದ ಎನ್. ನಾಗೇಂದ್ರಸ್ವಾಮಿ, ಎಸ್.ರಾಜಶೇಖರ್, ಕುಮಾರಸ್ವಾಮಿ, ಮಹೇಶ್, ಸಾಗರ್, ವಸಂತ್ ಕುಮಾರ್, ಕಾರ್ತಿಕ್, ನಿಂಗರಾಜು, ಶಿವಕುಮಾರ್, ಶಂಕರ್, ಕುಮಾ‌ರ್, ಸುನಿಲ್, ಸ್ಯಾಮುವೆಲ್, ಗಿರೀಶ್ ಮತ್ತಿತರ‌ ಸದಸ್ಯರು ಹಾಜರಿದ್ದರು.