ಮೈಸೂರು: ಮೈಸೂರು ಜಿಲ್ಲೆ
ಕರುನಾಡ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಿಗೆ ಸನ್ಮಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಂಡಿಪಾಳ್ಯದ ರಿಂಗ್ ರೋಡ್ ವೃತ್ತದಲ್ಲಿ ನಡೆದ ಈ ಕಾರ್ಯಕ್ರಮವನ್ನು ಶಾಸಕ ಜಿ. ಟಿ. ದೇವೇಗೌಡ ಅವರು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರ ಮುಖಾಂತರ ಚಾಲನೆ ನೀಡಿ ಶುಭ ಕೋರಿದರು.
ಖ್ಯಾತ ಸಾಹಿತಿ ಸಿ.ಪಿ ಕೃಷ್ಣಕುಮಾರ್ ಅವರು ಧ್ವಜಾರೋಹಣ ಮಾಡುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು.
ಗಿರೀಶ್ (ಜೆಡಿಎಸ್ ಮುಖಂಡ),ಬಿ.ಎ ಶಿವಶಂಕರ್ (ಹಿರಿಯ ಕನ್ನಡ ಚಳವಳಿ ನಾಯಕರು),ಎಂ.ರಾಮೇಗೌಡ (ರಾಜ್ಯ ಗೌರವಾಧ್ಯಕ್ಷರು ಕರುನಾಡ ರಕ್ಷಣಾ ವೇದಿಕೆ) ಅವರು ಮಾತನಾಡಿದರು.
ಬಿ ಎಂ ಶಿವಶಂಕರ್ (ಹಿರಿಯ ಕನ್ನಡ ಚಳುವಳಿ ನಾಯಕರು),
ಎಚ್.ಆರ್ ದೀಪಾ (ಮುಖ್ಯ ಅಧಿಕಾರಿ ಕಡಕೋಳ ಪಟ್ಟಣ ಪಂಚಾಯಿತಿ),
ಕುಮಾರಿ ನಿಶ್ಚಿತಾ ಪಿ ಗೌಡ(ರಾಜ್ಯಮಟ್ಟದ ಅಥ್ಲೆಟಿಕ್ಸ್),ಬಸವರಾಜ್(ರಾಜ್ಯಾಧ್ಯಕ್ಷರು ಕನ್ನಡ ರಕ್ಷಣಾ ವೇದಿಕೆ),ಸೈಯದ್ ಇಸಾಕ್
(ಕನ್ನಡ ಪುಸ್ತಕ ಪ್ರೇಮಿ),
ಗುರುಕರ್. ಕೆ .ಆರ್ (ಪರಿಸರ ಸಂರಕ್ಷಣೆ)
ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕ ಹೆಣ್ಣು ಮಕ್ಕಳಿಗೆ ಸೀರೆಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ರೂವಾರಿಯಾಗಿ ಜಿಲ್ಲಾಧ್ಯಕ್ಷ ಕೆ ವೇಣುಗೋಪಾಲ್ ಎಲ್ಲ ಜವಾಬ್ದಾರಿ ನಿರ್ವಹಿಸಿದರು.
ಜಿಲ್ಲಾ ಉಪಾಧ್ಯಕ್ಷ ಫಿಲಿಪ್ಸ್, ಜಿಲ್ಲಾ ಕಾರ್ಯದರ್ಶಿ ಚಂದ್ರು, ಕುಮಾರ್, ಪ್ರಕಾಶ್, ಸಿದ್ದೇಗೌಡರು ಸಾಥ್ ನೀಡಿದರು.
ವೇದಿಕೆಯ ಮೈಸೂರು ನಗರ ಅಧ್ಯಕ್ಷ
ಕೆ.ಎಸ್ ಹರ್ಷಿತ್ ಗೌಡ,ರಾಜ್ಯ ಮಹಿಳಾ ಅಧ್ಯಕ್ಷೆ ಸವಿತಾ ಎಸ್ ಗೌಡ,ಯುವ ಘಟಕದ ಅಧ್ಯಕ್ಷ ಸಂಜಯ್ ಹಾಗೂ ರಾಜ್ಯ ಕಾರ್ಯದರ್ಶಿ ಸತೀಶ್,ದರ್ಶನ್ ಸುನಿಲ್ ಉಪಸ್ಥಿತರಿದ್ದರು.