ಮೈಸೂರು: ಕರ್ನಾಟಕ ಯುವಘರ್ಜನೆ ವೇದಿಕೆ ವತಿಯಿಂದ ಮೈಸೂರು ಲಕ್ಷ್ಮಿಪುರಂ ಕಲ್ಯಾಣಿ ಮೋಟಾರ್ಸ್ ಡ್ರೈವಿಂಗ್ ಸ್ಕೂಲ್ ಮ್ಯಾನೇಜರ್ ರೋಹಿತ್ ಅವರೊಂದಿಗೆ ಅಪಘಾತದ ಪರಿಹಾರಗಳ ಕುರಿತು ಚರ್ಚಿಸಲಾಯಿತು.
ಮೈಸೂರು ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಭವಿಸುವ ಅಪಘಾತದ ಪರಿಹಾರಗಳ ಕುರಿತು ಅರಿವು ಮೂಡಿಸುವ ಬಗೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ವೇಳೆ ಕರ್ನಾಟಕ ಯುವಘರ್ಜನೆ ವೇದಿಕೆ ವತಿಯಿಂದ ರೋಹಿತ್ ಅವರನ್ನು
ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಕರ್ನಾಟಕ ಯುವಘರ್ಜನೆ ವೇದಿಕೆಯ ರಾಜ್ಯಾಧ್ಯಕ್ಷ ಉಮೇಶ್,ರಾಜ್ಯ ಕಾರ್ಮಿಕರ ಘಟಕದ ಅಧ್ಯಕ್ಷ ಕಿರಣ್ ಸೋಮಣ್ಣ,ಮೈಸೂರು ಜಿಲ್ಲಾಧ್ಯಕ್ಷ ಅವ್ವ ಮಹೇಶ್, ಮೈಸೂರು ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಅರುಣ್, ಆರ್,ಮೋಹನ್, ನಾಗೇಶ್ ಮತ್ತಿತರರು ಸಂಘದ ಎಲ್ಲಾ ಪದಾಧಿಕಾರಿಗಳ ಪರವಾಗಿ ಕಲ್ಯಾಣಿ ಮೋಟಾರ್ಸ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.