ಮೈಸೂರು: ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಷ್ಣು ಅಭಿಮಾನಿಗಳ ಸಂಭ್ರಮ ಹೇಳತೀರದಂತಿತ್ತು.
ಅಗ್ರಹಾರ ವೃತ್ತದಲ್ಲಿ ವಿಷ್ಣುವರ್ಧನ್ ಅಭಿಮಾನಿ ಬಳಗದವರು ಸಾಹಸಸಿಂಹ ವಿಷ್ಣುವರ್ಧನ್ ಗೆ ಘೋಷಣೆ ಕೂಗಿ ವಿಷ್ಣು ಭಾವಚಿತ್ರಗಳನ್ನು ಹಿಡಿದು ಖುಷಿಯಿಂದ ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಎಂ. ಡಿ ಪಾರ್ಥಸಾರಥಿ ಅವರು, ಕರ್ಣನಿಗೆ ಕೊನೆಗೂ ಕಾಲ ಕೂಡಿಬಂತು,15 ವರ್ಷದ ಅಭಿಮಾನಿಗಳ ಕನಸು ಇಂದು ನನಸಾಗಿದೆ ಅದಕ್ಕಾಗಿ ಸರ್ಕಾರಕ್ಕೆ ವಿಶೇಷ ಅಭಿನಂದನೆಗಳು ಎಂದು ತಿಳಿಸಿದರು.
ಈ ಬಾರಿ ವಿಷ್ಣು ವರ್ಧನ್ ಅವರ 75ಹುಟ್ಟು ಹಬ್ಬವನ್ನು ಅಭಿಮಾನಿಗಳೆಲ್ಲ ಸೇರಿ ಹಬ್ಬದಂತೆ ಆಚರಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಭಿನವ ಸರಸ್ವತಿ ಬಿ ಸರೋಜಾ ದೇವಿ ಅವರಿಗೂ ಕರ್ನಾಟಕ ರತ್ನ ನೀಡಿರುವುದನ್ನು ಸ್ವಾಗತಿಸುತ್ತೇವೆ ಎಂದು ಪಾರ್ಥಸಾರಥಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಜಿ ರಾಘವೇಂದ್ರ, ಬಸವರಾಜ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರವಿಚಂದ್ರ, ಎಸ್ ಎನ್ ರಾಜೇಶ್, ಟಿ ಎಸ್ ಅರುಣ್, ರವಿನಂದನ್, ಮಹಾನ್ ಶ್ರೇಯಸ್, ಲಕ್ಷ್ಮಣ್, ಚಿನ್ನ ಬೆಳ್ಳಿ ಸಿದ್ದಪ್ಪ, ಸಂತೋಷ್, ರವೀಂದ್ರ ಕುಮಾರ್, ಅಭಿ, ಹರೀಶ್ ನಾಯ್ಡು, ರಾಕೇಶ್ ಭಟ್ ಮತ್ತಿತರರು ಹಾಜರಿದ್ದರು.