ಮೈಸೂರು: ಇಲವಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ ಪಿ.ಅವರು
ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
೭೦ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಲವಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ ಪಿ.ಅವರಿಗೆ
ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ನೀಡಲಾದ ’ಕನ್ನಡಾಂಬೆ ರತ್ನ’ ಪ್ರಶಸ್ತಿಯನ್ನು ವೇದಿಕೆಯ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ, ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಕಿರಣ್, ಇ.ವಿ.ನಾಗರಾಜು, ಹರೀಶ್, ಹೊನ್ನೇಗೌಡ, ದೊರೆಸ್ವಾಮಿ, ಗುರು, ಶೇಖರ್, ಮೋಹನ, ಶ್ರೀನಿವಾಸ್, ವಿಜಿ ಕುಮಾರ್ ಮತ್ತು ಇತರೆ ಪದಾಧಿಕಾರಿಗಳು ಹಾಜರಿದ್ದರು.
ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾದಸಬ್ ಇನ್ಸ್‌ಪೆಕ್ಟರ್ ಮಹೇಂದ್ರ