ಮೈಸೂರು: ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಮೈಸೂರಿನ ಆರ್ ಗೇಟ್ ವೃತ್ತದ ಬಳಿ ಭಾನುವಾರ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ
ಚಳವಳಿ ಹಮ್ಮಿಕೊಳ್ಳಲಾಯಿತು.
ಕನ್ನಡ ಶಾಲೆಗಳನ್ನು ಉಳಿಸಿ,ಕನ್ನಡ ಮಾಧ್ಯಮವನ್ನು ಉಳಿಸಿ,ಕನ್ನಡ ಚಳವಳಿ
ವಾಟಾಳ್ ಪಕ್ಷದ ಹೋರಾಟಕ್ಕೆ, ವಾಟಾಳ್ ನಾಗರಾಜ್ ಅವರ ಹೋರಾಟಕ್ಕೆ ಜಯವಾಗಲಿ ಎಂಬ ಘೋಷಣೆಗಳನ್ನು ಚಳವಳಿಯಲ್ಲಿ ಭಾಗವಹಿಸಿದ್ದವರು ಕೂಗಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು,ಕನ್ನಡ ಮಾಧ್ಯಮ ಶಾಲೆಗಳು,ಕನ್ನಡ ಮಾಧ್ಯಮ ಉಳಿಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕನ್ನಡ ಮಾಧ್ಯಮ ಉಳಿಯಬೇಕು ಅಂತ ಹೇಳಿ ಬಳ್ಳಾರಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನವನ್ನು ನಿಲ್ಲಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ರಾಜ್ಯ ಸರ್ಕಾರ ಕೂಡಲೇ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದ ವಾಟಾಳ್,ಕನ್ನಡ ಮಾಧ್ಯಮ ಉಳಿಯಬೇಕು,ಬೆಂಗಳೂರು ನಗರದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಕನ್ನಡ ಮಾಧ್ಯಮ ಸಮ್ಮೇಳನವನ್ನ ನಡೆಸುತ್ತೇವೆ ಎಂದು ತಿಳಿಸಿದರು.
ಎಲ್ಲಾ ಕನ್ನಡಪರ ಸಂಘಟನೆಗಳು ಸೇರಿ ಕನ್ನಡ ಮಾಧ್ಯಮ ಶಾಲೆಗಳು,ಕನ್ನಡ ಮಾಧ್ಯಮ ಉಳಿಯಬೇಕು ಎಂದು ಒತ್ತಾಯಿಸಿ ಕರ್ನಾಟಕ ಬಂದ್ ಮಾಡುವ ಚಿಂತನೆ ಇದೆ ಎಂದು ಹೇಳಿದರು.
ಕನ್ನಡ ಶಾಲೆಗಳ ಉಳಿವಿಗಾಗಿ
ಪ್ರತಿಭಟನೆಯಲ್ಲಿ ಕನ್ನಡ ಹೋರಾಟಗಾರರಾದ ಶಿವಶಂಕರ್, ನಂಜುಂಡಸ್ವಾಮಿ, ಪಾರ್ಥಸಾರಥಿ, ತೇಜೇಶ್ ಲೋಕೇಶ್ ಗೌಡ, ಶಿವಕುಮಾರ್, ತಾಯೂರು ಗಣೇಶ್, ಹನುಮಂತಯ್ಯ, ರವಿ ನಾಯಕ್, ರವೀಶ್, ರಘು ಅರಸ್, ಬಸವರಾಜು, ರಾಘವೇಂದ್ರ, ಮಹೇಶ್, ಕುಮಾರ್, ಶಿವರಾಂ ಮತ್ತಿತರರು ಪಾಲ್ಗೊಂಡಿದ್ದರು.