ಮೈಸೂರು: ಮೈಸೂರಿನ ಮಹಿಳಾ ರಕ್ಷಣಾ ಪಡೆ ವತಿಯಿಂದ ಮೈಸೂರಿನ ಇನ್ಟಿಟ್ಯೂಟ್ ಆಫ್ ಎಜುಕೇಶನ್ ಸಭಾಂಗಣದಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಈ ಸಮಾರಂಭದಲ್ಲಿ ಮಹಿಳಾ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲತಾ ಗೌಡ ಮತ್ತು ಗೌರವ ಅಧ್ಯಕ್ಷರಾದ ಕಮಲಾ ನಟರಾಜ್ ಅವರು ವಿವಿಧ ಸಂಘಟನೆಗಳ ಅಧ್ಯಕ್ಷರುಗಳಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾಜ ಸೇವಕರಾದ ಮೇಘನ ಗೌಡ, ಮೈಸೂರು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ರತ್ನ ಹಾಲಪ್ಪ ಗೌಡ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ದಲಿತ ಮಹಿಳಾ ರಾಜ್ಯ ಅಧ್ಯಕ್ಷರಾದ ಬಬಿತ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ಸುಶೀಲ, ತುಳಸಿ ಸ್ವಯಂಸೇವಾ ಸಂಘದ ಮಹದೇವಮ್ಮ ಸಮಾಜ ಸೇವಕರಾದ ನಾಗೇಶ್, ಸವಾಲ್ ಪತ್ರಿಕೆಯ ಸಂಪಾದಕರಾದ ಪ್ರದೀಪ್ ಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷರಾದ ಶೈಲಜಾ ಎಂ ಯು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಲಿಂಗರಾಜು,ಕನ್ನಡ ಕ್ರಾಂತಿ ದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ, ಕನ್ನಡ ಚಳವಳಿಗಾರರಾದ ಮಹೇಶ್ ಕುಮಾರ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷರಾದ ಬಾಲಕೃಷ್ಣ, ಚಲನಚಿತ್ರ ನಿರ್ಮಾಕವರು ಮತ್ತು ನಿರ್ದೇಶಕರಾದ ಎಚ್ ವಿ. ಪುಟ್ಟಸ್ವಾಮಿ ಅವರುಗಳಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
