ಮೈಸೂರು: ಕನ್ನಡ ಕೈರಳಿ ಫೋರಂ ಟ್ರಸ್ಟ್ ಮೈಸೂರು ವತಿಯಿಂದ ಕಡುಬಡವರು ನಿರ್ಗತಿಕರಿಗೆ ಮನೆ ಕಟ್ಟಿ ಕೊಡುವಂತಹ ಒಂದು ಉತ್ತಮ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ
ಈ ಟ್ರಸ್ಟ್ ನವರು ಮೂಲತಃ ಕೇರಳದವರು. ಅಲ್ಲಿ ಕುಟುಂಬದ ಹಿರಿಯರು ಮತ್ತು ಸಂಬಂಧಿಕರು ಇದ್ದರೂ ಯಾವುದೋ ಕೆಲಸಗಳ ಮೇಲೆ ಕರ್ನಾಟಕದಲ್ಲಿ ಬಂದು ನೆಲೆಸಿ ಇಲ್ಲಿನವರೇ ಆಗಿ ಬಿಟ್ಟಿದ್ದಾರೆ. ಕರ್ನಾಟಕದ ನೀರು ಕುಡಿಯುತ್ತಿರುವ ಇವರು ಕನ್ನಡ ಮತ್ತು ಕರ್ನಾಟಕದ ಋಣ ತೀರಿಸಲು ಮುಂದಾಗಿದ್ದಾರೆ.ಹಾಗಾಗಿ ಈಗ ವಸತಿ ರಹಿತರಿಗೆ ಮನೆ ಯೋಜನೆ ಹಮ್ಮಿಕೊಂಡಿದ್ದಾರೆ.
ಒಂದು ವೇಳೆ ಬಿಪಿಎಲ್ ಕಾರ್ಡ್ ಹೊಂದಿದ ಒಂಟಿ ಜೀವನ ಸಾಗಿಸುತ್ತಿರುವ ವಿಧವೆಯರು ಹಿರಿಯ ನಾಗರಿಕರು ಅಥವಾ ಕಡು ಬಡವರು ಒಂದು ವೇಳೆ ಸಣ್ಣ ಪುಟ್ಟ ಜಾಗಗಳನ್ನು ಹೊಂದಿದ್ದು ಮನೆ ಕಟ್ಟಿಕೊಳ್ಳಲಾರದ ಸ್ಥಿತಿಯಲ್ಲಿದ್ದರೆ ಅಂತವರಿಗೆ ಕಟ್ಟಡ ಸಾಮಗ್ರಿಗಳನ್ನು ತಂದು ಉಚಿತವಾಗಿ ಅದೇ ಜಾಗದಲ್ಲಿ ಮನೆ ಕಟ್ಟಿ ಕೊಡುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಕನ್ನಡ ಕೈರಳಿ ಫೋರಂ ಟ್ರಸ್ಟ್ ಅಧ್ಯಕ್ಷ ಡಾ.ಮನು ಬಿ.ಮೆನನ್ ತಿಳಿಸಿದರು.
ಯಾರು ಖಾಯಂ ಆಗಿ ಮನೆಯನ್ನು ಹೊಂದಿಲ್ಲವೊ ಅಂತಹವರಿಗೆ ಸುರಕ್ಷಿತವಾದ ಸೂರು ಮತ್ತು ವಸತಿ ಸಹಾಯವನ್ನು ಒದಗಿಸಿ ಆ ಮೂಲಕ ಅವರು ಗೌರವಯುತವಾದ ಜೀವನವನ್ನು ನಡೆಸಲು ಸಹಾಯ ಮಾಡುವುದು ನಮ್ಮ ಟ್ರಸ್ಟ್ ನ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಸೂರು ಇಲ್ಲದೆ ಇರುವ ವಸತಿ ರಹಿತ ಕುಟುಂಬಗಳು, ವಿಧವೆಯರು, ಬೇರೆಯವರ ಮೇಲೆ ಅವಲಂಬಿತರಾಗಿರುವ ತಾಯಂದಿರು,ಹಣಕಾಸು ಇಲ್ಲದ ಹಿರಿಯ ನಾಗರೀಕರು,ಅಗತ್ಯವುಳ್ಳ ವಿಕಲಚೇತನರು,ದಿನಗೂಲಿ ನೌಕರರು,ನಿರುದ್ಯೋಗಿ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು
ಡಾ: ಮನು ಬಿ ಮೆನನ್ ತಿಳಿಸಿದರು.
ಅರ್ಹರು ಆಧಾರ್ ಕಾರ್ಡ್,ಬಡವರೆಂಬುದಕ್ಕೆ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ದಾಖಲೆ,ಜಾಗದ ದಾಖಲೆಯನ್ನು ನೀಡಬೇಕಿದೆ.
ಹೆಚ್ಚಿನ ಮಾಹಿತಿಗಾಗಿ:-9945502475, 9481087499, 8861499968 ಮತ್ತು
Email: kannadakairaliforum@gamil.com
ಕನ್ನಡ ಕೈರಳಿ ಫೋರಂ ಟ್ರಸ್ಟ್ ಮೈಸೂರು,ಪ್ಲಾಟ್ ನಂ-295/3,ನಿಯರ್ ಗೌಟ್ ಸ್ಕೂಲ್ ಮಹದೇವಪುರ ಮೇನ್ ರೋಡ್, ಕಾಳಿಸಿದ್ದನಹುಂಡಿ,ರಮ್ಮನಹಳ್ಳಿ ವಿಲೇಜ್,ಮೈಸೂರು ಜಿಲ್ಲೆ, 570019 ಈ ವಿಳಾಸದಲ್ಲೂ ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯರಾದ ರಾಧಾಕೃಷ್ಣ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
