ಮೈಸೂರು: ಮೈಸೂರು ನಗರದ ಬನ್ನಿಮಂಟಪ ನಿವಾಸಿ, ಹಿರಿಯ ಕನ್ನಡ ಚಳವಳಿ ಹೋರಾಟಗಾರರಾದ ಮೈ.ನಾ ಗೋಪಾಲಕೃಷ್ಣ ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಅವರಿಗೆ 85 ವೃರ್ಷಗಳಾಗಿತ್ತು,
ವಯೋಸಹಜ ಕಾಯಿಲೆಯಿಂದ ಅವರು ಮೃತಪಟ್ಟಿದ್ದಾರೆ.
ಮೃತರು ಮಕ್ಕಳು, ಅಳಿಯಂದರು, ಸೊಸೆಯಿಂದರು, ಮೊಮ್ಮಕ್ಕಳು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಜೋಡಿ ತೆಂಗಿನ ಮರ ರುದ್ರಭೂಮಿಯಲ್ಲಿ ಶುಕ್ರವಾರ ಮಧ್ಯಾನ 1 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು
ಕುಟುಂಬ ಮೂಲಗಳು ತಿಳಿಸಿವೆ.
ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷರಾದ ಎಂ ಮೋಹನ್ ಕುಮಾರ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.