ಕನಕರು ದೇಶ ಕಂಡ ಶ್ರೇಷ್ಠ ದಾಸರು: ರಘುರಾಮ್ ವಾಜಪಾಯಿ

ಮೈಸೂರು: ಕನಕದಾಸರು ದೇಶ ಕಂಡ ದಾಸ ಶ್ರೇಷ್ಠರು ಎಂದು ಹಿರಿಯ ಸಮಾಜ ಸೇವಕ
ಕೆ.ರಘುರಾಮ್ ವಾಜಪಾಯಿ ತಿಳಿಸಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ಸಿ.ಎಸ್.ಐ. ಗರ್ಲ್ಸ್ ಬೋರ್ಡಿಂಗ್ ಹೋಮ್ ನಲ್ಲಿ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 538ನೇ ಜಯಂತೋತ್ಸವ ಆಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರಿಗೆ ಕನಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜಾತಿ, ಮತ, ಪಂಥಗಳನ್ನು ಹೋಗಲಾಡಿಸಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಸಮ ಸಮಾಜ ಕಟ್ಟುವ ಕೆಲಸ ಮಾಡಿದವರು ಎಲ್ಲಾ ಸಮಾಜದ ಏಳಿಗೆಗೆ ಶ್ರಮಿಸಿದವರು ಎಂದು ಬಣ್ಣಿಸಿದರು.

ರಾಜ್ಯ ಜೆ.ಡಿ.ಎಸ್. ವಕ್ತಾರ ರವಿಚಂದ್ರ ಗೌಡ ಮಾತನಾಡಿ,ಸಮಾಜ ಸುಧಾರಣೆಗಾಗಿ ಕೀರ್ತನೆಗಳ ಮೂಲಕ ಜಾತಿ ಮುಖ್ಯ ಅಲ್ಲ ನೀತಿ ಮುಖ್ಯ ಎಂದು ಕನಕದಾಸರು ಸಾರಿದರು

ತಮ್ಮ ಭಕ್ತಿಯಿಂದ ಶ್ರೀ ಕೃಷ್ಣನನ್ನೇ ತನ್ನಡೆಗೆ
ಒಲಿಸಿಕೊಂಡವರು, ಸಂತ ಶ್ರೇಷ್ಠ ಶ್ರೀ ಭಕ್ತಿ ಕನಕದಾಸರು ಎಂದು ಹೇಳಿದರು.

ಜನಸಾಮಾನ್ಯರಲ್ಲಿ ಮಾನವೀಯ ಮೌಲ್ಯವನ್ನು ಬೆಳೆಸುವ ದಾಸ ಸಾಹಿತ್ಯ ಭಕ್ತಿ ಪಂಥದ ಮೂಲಕ ಮನಕುಲಕ್ಕೆ ಅತ್ಯುತ್ತಮ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು.

ಈ‌ ವೇಳೆ ಬೋರ್ಡಿಂಗ್ ಹೋಮ್ ನ ಹೆಣ್ಣು ಮಕ್ಕಳಿಗೆ ನೋಟ್ ಬುಕ್,ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಕನಕ ಜಯಂತಿಯನ್ನು ಆಚರಿಸಲಾಯಿತು.

ಡಾ.ರಘುರಾಮ್ ವಾಜಪೇಯಿ, ( ಸಾಮಾಜಿಕ ಕ್ಷೇತ್ರ)ಎನ್ ರಾಜು, ( ಸಂಘಟನಾ ಕ್ಷೇತ್ರ) ವಿಜಯ್ ಕುಮಾರ್ ( ಸಾಮಾಜಿಕ ಕ್ಷೇತ್ರ) ಕಲೀo ಷರೀಫ್, ( ಸಾಮಾಜಿಕ ಕ್ಷೇತ್ರ) ಮುತ್ತಣ್ಣ ( ವೈದ್ಯಕೀಯ ಕ್ಷೇತ್ರ) ಎಸ್.ಆರ್.ರವಿಕುಮಾರ್ ( ಸಹಕಾರಿ ಕ್ಷೇತ್ರ)ಮಹದೇವ್ (ಕ್ರೀಡಾ ಕ್ಷೇತ್ರ), ಸಿ.ಜೆ. ಹೋಮದೇವ್( ಪತ್ರಿಕಾ ಕ್ಷೇತ್ರ), ಎಂ ರಾಮಕೃಷ್ಣ (ಧಾರ್ಮಿಕ ಕ್ಷೇತ್ರ)ಇವರನ್ನು ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷರಾದ ಲಿಂಗರಾಜು, ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ರವಿಚಂದ್ರ,ಬಿಜೆಪಿ ಮುಖಂಡ ಪುರುಷೋತ್ತಮ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ಕೆ ಆರ್ ಮಿಲ್ ಶಿವಣ್ಣ, ರಾಜುಬಂಡೆಪ್ಪ.ಭವ್ಯ,
ಸುಬ್ರಮಣ್ಯ,ರಾಜೇಶ್ ಕುಮಾರ್,ಮಹೇಶ, ಬೆಳಕು ಚಾರಿಟೇಬಲ್ ಟ್ರಸ್ಟ್ ನ ಕೃಷ್ಣ ಮಧುಸೂದನ್, ಶ್ರೀಧರ್, ಎಸ್. ಪಿ.ಅಕ್ಷಯ್ ಪ್ರಿಯಾದರ್ಶನ್, ದತ್ತ,ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.