ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ ಚುನಾವಣೆ: ರವಿಚಂದ್ರ ನಾಮಪತ್ರ ಸಲ್ಲಿಕೆ

ಮೈಸೂರು: ಮೈಸೂರಿನ ದೇವರಾಜ ಮೊಹಲ್ಲದಲ್ಲಿರುವ ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನ. 16ರಂದು ಹಾರ್ಡ್ವಿಕ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದೆ.

ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘಕ್ಕೆ ಸಾಮಾನ್ಯ ಕ್ಷೇತ್ರದಿಂದ ಅಭ್ಯರ್ಥಿಯಾಗಿ ರವಿಚಂದ್ರ ಎಂ ಸ್ಪರ್ಧಿಸಿದ್ದು,ಅವರು
ಚುನಾವಣಾಧಿಕಾರಿ ರಾಜು ರವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ‌ ವೇಳೆ ಮೂಡ ಮಾಜಿ ಸದಸ್ಯರಾದ ನವೀನ್ ಕುಮಾರ್ , ಗೋಕುಲಂ ರಾಮಣ್ಣ, ಆಶ್ರಯ ಸಮಿತಿ ಸದಸ್ಯರಾದ ಸೋಮಶೇಖರ್, ವಾರ್ಡ್ ಅಧ್ಯಕ್ಷರಾದ ಆನಂದ್, ಕನಕಗಿರಿ ದೀಪಕ ,ಜ್ಞಾನೇಶ್, ಪವನ್ ಹಾಜರಿದ್ದರು.