ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಕ್ತಿ ಪರಂಪರೆಯ ಹರಿದಾಸ ಕವಿ, ಸಮಾಜ ಸುಧಾರಕ ಕವಿ ಶ್ರೀ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಸವರು ಮಾತನಾಡಿ ಕನಕದಾಸರು ಸಮಾನತೆ, ಸಹಾನುಭೂತಿ ಮತ್ತು ಮಾನವೀಯತೆ ಎಂಬ ಮೌಲ್ಯಗಳನ್ನು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ. ಅವರ ಸಾಹಿತ್ಯ ಇಂದು ಕೂಡ ಸಾಮಾಜಿಕ ಜಾಗೃತಿಗೆ ದಾರಿದೀಪವಾಗಿದೆ,ಎಂದು ಹೇಳಿದರು.
ಭೌತ ಶಾಸ್ತ್ರ ಉಪನ್ಯಾಸಕ ರಾಮಾನುಜ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಕನಕದಾಸರ ಉಪದೇಶಗಳು ಯುವ ಪೀಳಿಗೆಗೆ ಮಾರ್ಗದರ್ಶನ. ಮನುಷ್ಯರಲ್ಲಿ ಮಾನವೀಯತೆ, ಶಿಸ್ತು, ಧರ್ಮ-ಸಮತೆಯ ಗುಣ ಬೆಳೆಸುವ ದಾಸ ಸಾಹಿತ್ಯವನ್ನು ಅಧ್ಯಯನ ಮಾಡಬೇಕು, ಎಂದು ಸಲಹೆ ನೀಡಿದರು.
ಕನಕದಾಸರ ಸಂಪೂರ್ಣ ಜೀವನ ಚಿತ್ರಣ ಮತ್ತು ಅವರ ಸಾಹಿತ್ಯ ಕೊಡುಗೆಗಳ ಮಾಹಿತಿಯನ್ನು ಕನ್ನಡ ಭಾಷಾ ಉಪನ್ಯಾಸಕಿ ಡಾ.ಕೆ.ಮಾಲತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ ಎಸ್,ಹೆಚ್. ಕೆ ಪ್ರಕಾಶ್, ಎನ್ ನಾಗರಾಜು, ದಿನೇಶ್, ರಂಗಸ್ವಾಮಿ, ಹರೀಶ್, ಮೀನಾ, ಸುಮಾ, ಸುಮಿತ್ರ ,ಸುಲಕ್ಷಣ, ವತ್ಸಲ, ಹರೀಶ್ ನಾಗರಾಜ ರೆಡ್ಡಿ, ದಿವ್ಯ, ಮಹದೇವ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
