ಮೈಸೂರು: ತಮ್ಮ ಕೀರ್ತನೆಗಳ ಮೂಲಕ ಕನಕದಾಸರು ಸಮಾಜದ ಲೋಪದೋಷಗಳನ್ನು ತಿದ್ದಲು ಯತ್ನಿಸಿದರು ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.
ಸಂತ ಕವಿ ಶ್ರೀ ಕನಕದಾಸರ 537 ನಯ ಜಯಂತಿ ಅಂಗವಾಗಿ ಮೈಸೂರು ಯುವ ಬಳಗದ ವತಿಯಿಂದ ಕಲಾ ಮಂದಿರದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ನಂತರ ಶಾಸಕರಾದ ಹರೀಶ್ ಗೌಡರಿಗೆ ಕುರಿ ಕಂಬಳಿಯನ್ನು ಹೊದಿಸಿ ಕನಕದಾಸರ ಭಾವಚಿತ್ರವನ್ನು ಕೊಟ್ಟಿ ಶುಭ ಕೋರಿದರು.

ನಂತರ ಮಾತನಾಡಿದ ಹರೀಶ್ ಗೌಡರು
800ಕ್ಕೂ ಹೆಚ್ಚು ಕೀರ್ತನೆಗಳನ್ನು ಬರೆದ ಕನಕದಾಸರು, ನಳ ಚರಿತ್ರೆ,ಮೋಹನ ತರಂಗಿಣಿ, ಹರಿಭಕ್ತಿ ಸಾರ, ರಾಮಧ್ಯಾನ ಚರಿತೆ’ಯಂತಹ ಕಾವ್ಯಗಳನ್ನು ರಚಿಸಿದರು ಅವರ ವಿಚಾರಧಾರಗಳು ಸಾರ್ವಕಾಲಿಕ ಎಂದು ತಿಳಿಸಿದರು.
ಕನಕದಾಸರು ಮನುಷ್ಯನ ಅಹಂಕಾರ, ಡಾಂಭಿಕತೆ ಹಾಗೂ ಭೋಗದ ಜೀವನವನ್ನು ಕಟುವಾಗಿ ಟೀಕಿಸಿದರು, ಸಮಾನತೆ ಹಾಗೂ ಸರಳ ಜೀವನದ ಸಂದೇಶಗಳನ್ನು ನೀಡಿದರು ಎಂದು ಹೇಳಿದರು.
ನವೀನ್ ರವಿಚಂದ್ರ, ಲೋಕೇಶ್, ನಿಶಾಂತ್, ಪಟೇಲ್, ಚಂದ್ರಶೇಖರ್ ,ಕರಿಗೌಡ, ಮಂಜುಳಾ, ಶಾಂತಿ, ಮಂಗಳ ,ಗುರು ,ಚೇತನ್ ಮುಂತಾದವರು ಭಾಗವಹಿಸಿದ್ದರು.