ಲಖನೌ: ಮದುವೆ ಮನೆ ಅಂದರೇನೆ ಸಂಭ್ರಮ,ಸಡಗರ ತುಂಬಿ ತುಳುಕತ್ತಾ ಇರುತ್ತೆ,ಹೀಗಿರುವಾಗ ಚಿರತೆ ಬಂದರೆ ಹೇಗಾಗಿರಬೇಡಾ ಹೇಳಿ!
ಅದೇನೊ ಲಖನೌ ನ ಕಲ್ಯಾಣ ಮಂಟಪಕ್ಕೆ ಚಿರತೆ ಎಂಟ್ರಿ ಕೊಟ್ಟು ತೀವ್ರ ಆತಂಕ ಎದುರಾದ ಪ್ರಸಂಗ ನಡೆದಿದ್ದು,ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ.ಚಿರತೆಗೆ ಮದುವೆ ನೋಡಬೇಕು ಅನ್ಸಿತ್ತೇನೊ,ಹೊಟ್ಟೆ ಹಸಿವಾಗಿತ್ತೇನೊ ಹೀಗೆ ಕಾಮೆಂಟ್ ಗಳು ಬಂದಿವೆ.
ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ರಾತ್ರಿ ಚಿರತೆ ನುಗ್ಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದ್ದು ಅದನ್ನು ಓಡಿಸಲು ಮುಂದಾದಾಗ ಅರಣ್ಯಾಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ
ಜೀವ ಉಳಿಸಿಕೊಳ್ಳಲು ವಧು-ವರರು ಓಡಿ ಕಾರಿನಲ್ಲಿ ಸಿಲುಕಿಹಾಕಿಕೊಳ್ಳಬೇಕಾಯಿತು.
ಬುದ್ಧೇಶ್ವರ ರಸ್ತೆ ಪ್ರದೇಶದಲ್ಲಿ ರಾತ್ರಿ ಈ ಘಟನೆ ಸಂಭವಿಸಿದ್ದು, ಚಿರತೆ ಬ್ಯಾಂಕ್ವೆಟ್ ಹಾಲ್‌ಗೆ ಪ್ರವೇಶಿಸಿದ ಕೂಡಲೇ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಧಿಕ್ಕಾಪಾಲಾಗಿ ಓಡಿದ್ದಾರೆ,ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಚಿರತೆ ನುಗ್ಗುತ್ತಿದ್ದಂತೆ ಮಂಟಪದಲ್ಲಿ ಕುಳಿತಿದ್ದ ವಧು-ವರರೂ ಕೂಡ ಓಡಿ ಹೋಗಿ ಕಾರಿನಲ್ಲಿ ಲಾಕ್ ಮಾಡಿಕೊಂಡಿದ್ದಾರೆ.
ತಕ್ಷಣ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಹಲವು ಗಂಟೆಗಳ ಪ್ರಯತ್ನದ ನಂತರ ತಡರಾತ್ರಿ 2 ಗಂಟೆ ಸುಮಾರಿಗೆ ಚಿರತೆಯನ್ನು ಸೆರೆಹಿಡಿಯಲಾಗಿದೆ.
ಪೊಲೀಸರ ಪ್ರಕಾರ, ಚಿರತೆ ಹಿಡಿಯುವ ವೇಳೆ ಅರಣ್ಯ ಇಲಾಖೆ ಅಧಿಕಾರಿ ಮುಕದ್ದರ್ ಅಲಿ ಅವರ ಕೈಗೆ ಗಾಯಗಳಾಗಿವೆ. ಚಿರತೆ ಹಿಡಿಯುವವರೆಗೂ, ವಧು ಮತ್ತು ವರರ ಕುಟುಂಬದವರು ಸುರಕ್ಷತೆಗಾಗಿ ತಮ್ಮ ವಾಹನಗಳಲ್ಲಿ ಕುಳಿತಿದ್ದರು ಎಂದು ತಿಳಿಸಿದ್ದಾರೆ.