ಮೈಸೂರು: ಮೈಸೂರಿನ ಕಲಿಕೆ ಶಿಕ್ಷಣ ಟ್ರಸ್ಟ್ ತನ್ನ ಮೊದಲ ವಾರ್ಷಿಕೋತ್ಸವವನ್ನು
ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳುವ ಮೂಲಕ ವಿಶೇಷವಾಗಿ ಆಚರಿಸುತ್ತಿದೆ,
ಶಿಬಿರವು ಫೆ.23 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮೈಸೂರಿನ ವಿಜಯನಗರ 4 ನೇ ಹಂತ, 1 ನೇ ಹಂತದಲ್ಲಿರುವ ಕಲಿಕೆ ಶಿಕ್ಷಣ ಟ್ರಸ್ಟ್ ಕಚೇರಿಯಲ್ಲಿ ನಡೆಯಲಿದೆ.
ಕಲಿಕೆ ಟ್ರಸ್ಟ್, ಅಗತ್ಯವಿರುವವರಿಗೆ ಉಚಿತ ಶೈಕ್ಷಣಿಕ ಕಾರ್ಯಾಗಾರಗಳು, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ವಿದ್ಯಾರ್ಥಿವೇತನಗಳು, ಆರ್ಥಿಕ ನೆರವು ಮತ್ತು ವೈದ್ಯಕೀಯ ನೆರವು ನೀಡಲು ಬದ್ಧವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಲಿಕೆ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥರಾದ ಶಿವು ಮತ್ತು ಅಮೂಲ್ಯ ತಿಳಿಸಿದರು
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಾಸಕರುಗಳಾದ ಜಿ.ಟಿ. ದೇವೇಗೌಡ,
ಕೆ. ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ,ಮಾಜಿ ಸಂಸದ
ಪ್ರತಾಪ್ ಸಿಂಹ ಮತ್ತಿತರರು ಭಾಗವಹಿಸುವರು.
ಉಚಿತ ವೈದ್ಯಕೀಯ ಶಿಬಿರದಲ್ಲಿ
ಕೆವಿಸಿ ಆಸ್ಪತ್ರೆ ವೈದ್ಯಕೀಯ ಸಮಾಲೋಚನೆಗಳ ಜೊತೆಗೆ ಬಿಪಿ, ಸಕ್ಕರೆ ಮತ್ತು ಸ್ತ್ರೀರೋಗ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕಣ್ಣಿನ ತಪಾಸಣೆ ಮತ್ತು ಕಡಿಮೆ ವೆಚ್ಚದ ಶಸ್ತ್ರಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಮೊದಲ 30 ಜನರಿಗೆ ಅರ್ಹರಿಗೆ ಕನ್ನಡಕಗಳನ್ನು ನೀಡಲಾಗುವುದು ಮತ್ತು ಸುಮಾರು 10-12 ವ್ಯಕ್ತಿಗಳಿಗೆ ಕಡಿಮೆ ವೆಚ್ಚದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಉಚಿತ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಲು ಮತ್ತು ಆರೋಗ್ಯ ಸೇವೆಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ಟ್ರಸ್ಟ್ ನ ಶಿವು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಅವರೊಂದಿಗೆ ಶಿವು ಮತ್ತು ಅಮೂಲ್ಯ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.