ಕಳರಿ ಪಯಟ್ಟು ವೀರನ ಪಾತ್ರದಲ್ಲಿ ರಿಷಬ್ ಶೆಟ್ಟಿ:ಅಭಿಮಾನಿಗಳು ಖುಷ್

Spread the love

ಬೆಂಗಳೂರು, ಆ‌.22: ಕಾಂತಾರ ಚಾಪ್ಟರ್ 1
ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಅವರು ಕಳರಿ ಪಯಟ್ಟು ಮಾಡಿದ್ದು ಅಭಿಮಾನಿಗಳು‌ ಕುಣಿಯುವಂತೆ ಮಾಡಿದೆ.

ಇತ್ತೀಚೆಗೆ ರಿಷಬ್ ಕಳರಿ ಪಯಟ್ಟು ಕಲಿಯುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಕಾಂತಾರ ಚಾಪ್ಟರ್ 1 ರಲ್ಲಿ
ಕಳರಿ ಪಯಟ್ಟು ‌ವೀರನ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿರುವುದು ಇದು ನಿಜ ಎಂಬುದನ್ನು ಸಾಬೀತು ಮಾಡಿದೆ.

ಚಿತ್ರದಲ್ಲಿನ ಕಳರಿ ಪಯಟ್ಟು ವೀರನ ಪಾತ್ರದ ಲುಕ್ ಅನಾವರಣ ಆಗಿದ್ದು,ಈ ಭಂಗಿಯಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾವು ಆಗಸ್ಟ್ ಕೊನೆಯ ವಾರದಲ್ಲಿ 4ನೇ ಹಂತದ ಚಿತ್ರೀಕರಣ ನಡೆಯಲಿದೆ.

ಕಾಂತಾರ ಚಾಪ್ಟರ್ 1 ಸಿನಿಮಾ ಕಾಂತಾರದ ಹಿಂದಿನ ಕತೆಯಾಗಿದೆ. ಕದಂಬ ಯುಗದ ಪಂಜುರ್ಲಿ ದೇವತೆಯ ಕಥೆಯನ್ನು ಇದು ಹೊಂದಿದೆ.