ಕ ಸಾ ಪ ಆವರಣ ಸ್ವಚ್ಛಗೊಳಿಸಿದಲಯನ್ ಮೈಸೂರು ಅಂಬಾಸಿಡರ್ಸ್ ಸಂಸ್ಥೆ

Spread the love

ಮೈಸೂರು: ಲಯನ್ ಮೈಸೂರು ಅಂಬಾಸಿಡರ್ಸ್ ಸಂಸ್ಥೆಯು ಇಂದು ಸೇವಾ ಚಟುವಟಿಗಳನ್ನು ಹಮ್ಮಿಕೊಂಡಿತು.

ಇದರ ಅಂಗವಾಗಿ ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಆವರಣವನ್ನು ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸಲಾಯಿತು.

ಕಸಾಪ ಆವರಣದಲ್ಲಿ ಜನ ಬಂದು ಬಿಸಾಡಿದ ತಿಂಡಿಯ ಕವರುಗಳು,ಪ್ಲಾಸ್ಟಿಕ್ ವಸ್ತುಗಳನ್ನು ಶೇಖರಿಸಿ ಸಾಗಿಸಲಾಯಿತು.

ಇದೇ‌ ವೇಳೆ ತ್ಯಾಜ್ಯ ಗಿಡಗಳು,ಹುಲುಸಾಗಿ‌ ಬೆಳೆದಿದ್ದ ಕಳೆ‌ ಗಿಡಗಳು ಮತ್ತಿತರ ಬೇಡದ ಗಿಡಗಳನ್ನು ಕತ್ತರಿಸಿ ತೆಗೆಯಲಾಯಿತು.

ಈ ಶ್ರಮಾದಾನದಲ್ಲಿ ಸಂಸ್ಥೆಯ ಅಧ್ಯಕ್ಷ ಲಯನ್ ವಿ ಶ್ರೀಧರ್, ಕಾರ್ಯದರ್ಶಿ ಪಿ ಮಲ್ಲಿಕಾರ್ಜುನಪ್ಪ, ಖಜಾಂಚಿ ಎಚ್.ಆರ್ ರವಿಚಂದ್ರ, ಪ್ರಾಂತೀಯ ಅಧ್ಯಕ್ಷ ಕೆ .ಆರ್. ಭಾಸ್ಕರಾ ನಂದ ,ವಲಯ ಅಧ್ಯಕ್ಷ ಎಚ್. ಸಿ ಕಾಂತರಾಜು ಸದಸ್ಯರಾದ ಕೆ. ಟಿ ವಿಷ್ಣು, ಅಮರಭವಾನಿ ,ಸನಂದ ಮತ್ತು ಶ್ರೀಮತಿ ಸನಂದ ಅವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಲಯನ್ ಜಿಲ್ಲಾ ಅಧ್ಯಕ್ಷ ಸಿ.ಆರ್ ದಿನೇಶ್ ಅವರು ತಿಳಿಸಿದ್ದಾರೆ.