ಮೈಸೂರು: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ,ಸರಿಪಡಿಸಲು ಕುಮಾರಣ್ಣನ ಜತೆ ಕೈ ಜೋಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ಜಿಲ್ಲೆಯ ಕೆ.ಆರ್ ನಗರದ ರೇಡಿಯೋ ಮೈದಾನದಲ್ಲಿ ಕೆ ಆರ್ ನಗರ ಕ್ಷೇತ್ರದ ಜನತೆ ಆಯೋಜಿಸಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಅಭಿಮಾನದ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿಖಿಲ್ ಮಾತನಾಡಿದರು.
ವೈಜಾಕ್ ವಿಶಾಖಪಟ್ಟಣ ಸ್ಟೀಲ್ ಉಕ್ಕಿನ ಕೈಗಾರಿಕೆ ಬಹಳ ವರ್ಷಗಳಿಂದ ಮುಚ್ಚಿಹೋಗಿತ್ತು. ಅದಿಕ್ಕೆ ಜೀವ ಕೊಡಬೇಕು ಎಂದು ಕೇಂದ್ರದ ಆರ್ಥಿಕ ಸಚಿವರನ್ನ ಭೇಟಿ ಮಾಡಿ ವೈಜಾಕ್ ಕಾರ್ಖಾನೆಗೆ ಬೇಕಾಗಿರುವ ಹಣವನ್ನ ಬಿಡುಗಡೆಮಾಡಿ ಎಂದು ಕುಮಾರಣ್ಣ ಅವರು ಮನವಿ ಮಾಡಿದ್ದರ ಫಲ ವಿಶಾಖಪಟ್ಟಣದಲ್ಲಿ ವೈಜಾಖ ಕಾರ್ಖಾನೆ ಆರಂಭವಾಗಿದೆ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ,ಅದರಲ್ಲೂ ಯುವ ಸಮುದಾಯದಲ್ಲಿ ಹೆಚ್ಚು ಇದೆ. ವಿಪರ್ಯಾಸವೆಂದರೆ ಯುವ ಸಮುದಾಯದ ಮಕ್ಕಳಿಗೆ ಉದ್ಯೋಗ ಸೃಷ್ಟಿ ಆಗಿಲ್ಲ, ಇದನ್ನ ಬಗೆ ಹರಿಸಬೇಕೆಂದು ಕುಮಾರಣ್ಣನ ಮನಸ್ಸಿನಲ್ಲಿದೆ,ರಾಜ್ಯದಲ್ಲಿ ಬಹಳಷ್ಟು ಜನರಿಗೆ ಉದ್ಯೋಗ ಇಲ್ಲ
ಇವತ್ತು ಕುಮಾರಣ್ಣ ಕೇಂದ್ರ ಮಂತ್ರಿಯಾಗಿದ್ದಾರೆ ಇದಕ್ಕೆ ಪ್ರತಿಫಲ ಸಿಗಬೇಕು ಅಂದರೆ ರಾಜ್ಯ ಸರ್ಕಾರ ಕುಮಾರಣ್ಣನ ಜತೆ ಕೈ ಜೋಡಿಸಬೇಕು ಎಂದು ನಿಖಿಲ್ ಮನವಿ ಮಾಡಿದರು.
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಸುದ್ದಿ ಅಪ್ರಸುತ, ಪಕ್ಷದ ಚೌಕಟ್ಟಿನಲ್ಲಿ ಇದು ಯಾವುದೂ ಚರ್ಚೆ ಆಗಿಲ್ಲ ನಾನು ಪಕ್ಷದ ಶಿಸ್ತಿನ ಕಾರ್ಯಕರ್ತ ಎಂದು ತಿಳಿಸಿದರು.