ಮೈಸೂರು: ಚನ್ನಪಟ್ಟಣ ಉಪ
ಚುನಾವಣೆಯಲ್ಲಿ ಎನ್‌ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಶಾಸಕ ಕೆ. ಬಿ ಪ್ರಸನ್ನ ಕುಮಾರ್ ಅವರು ಬ್ರಾಹ್ಮಣ ಮುಖಂಡರ ಮನೆಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ಮಾಡಿದರು.
ಚನ್ನಪಟ್ಟಣದ ವರದರಾಜ ದೇವಸ್ಥಾನ ರಸ್ತೆಯಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನದ ಮುಂಭಾಗ ನಿಖಿಲ್ ಪರ ಪ್ರಸನ್ನ ಕುಮಾರ್ ಅವರು ಕರಪತ್ರ ನೀಡಿ ಮತಯಾಚನೆ ಮಾಡಿದರು.
ನಂತರ ಪ್ರಸನ್ನ ಕುಮಾರ್ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನೆ ಜೊತೆ ಸೇರಿ ಬ್ರಾಹ್ಮಣ ಸಮುದಾಯದ ಮುಖಂಡರೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಈ ವೇಳೆ ಮಾತನಾಡಿದ ಕೆ.ಬಿ ಪ್ರಸನ್ನ ಕುಮಾರ್, ಬ್ರಾಹ್ಮಣ ಸಮುದಾಯದಕ್ಕೆ ಕೊಟ್ಟ ಮಾತಿನಂತೆ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮವನ್ನ ಹೆಚ್. ಡಿ ಕುಮಾರಸ್ವಾಮಿ ರವರು ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಜಾರಿಗೆ ತಂದರು ಎಂದು ಸ್ಮರಿಸಿದರು.
ಶಂಕರ ಜಯಂತಿ ಆಚರಣೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾಗೆ ನಿವೇಶನವನ್ನ ಮಂಜೂರು ಮಾಡಿ ವಿಪ್ರ ಸಮಾಜದ ಚಟುವಟಿಕೆಗಳಿಗೆ, ಅಭಿವೃದ್ಧಿಗೆ ಸಹಕರಿಸಿದ್ದಾರೆ ಇದರಿಂದ ಆರ್ಥಿಕವಾಗಿ ಹಿಂದುಳಿದ ವಿಪ್ರ ಕುಟುಂಬಗಳಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಸಹಕಾರಿ ಸಾಂಸ್ಕೃತಿಕ ಕ್ಷೇತ್ರದ ಸಾಕಷ್ಟು ಮಂದಿ ಮುಖ್ಯ ವಾಹಿನಿಗೆ ಬರವಲ್ಲಿ ಉಪಯುಕ್ತವಾಯಿತು ಎಂದು ತಿಳಿಸಿದರು.
ಅರ್ಚಕ ಪುರೋಹಿತರು, ಶಿಕ್ಷಕರು, ವಿಪ್ರ ಉದ್ಯಮಿಗಳು, ಅಡುಗೆ ಸಂಘದವರು, ಕಲಾವಿದರು ಸೇರಿದಂತೆ ವಿಪ್ರ ಸಮಾಜದ ಜೊತೆ ಚಟುವಟಿಕೆಗಳೊಂದಿಗೆ ನಿಕಟಸಂಪರ್ಕವಿರುವ ಎನ.ಡಿ.ಎ ಅಭ್ಯರ್ಥಿ ನಿಖಲ್ ಕುಮಾರಸ್ವಾಮಿ ಅವರಿಗೆ ಈ ಭಾರಿ ವಿಪ್ರ ಸಮಾಜ ಆಶೀರ್ವಾದಿಸಿ ಭಾರಿಮತಗಳಿಂದ ಜಯಗೊಳಿಸುವಂತೆ ಮಾಡಬೇಕೆಂದು ಮನವಿ ಮಾಡಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಪ್ರಶಾಂತ್ (ಪಚ್ಚಿ),ರಾಘವೇಂದ್ರ ಮಯ್ಯ, ಕಡಕೋಳ ಜಗದೀಶ್, ಮಹಾನ್ ಶ್ರೇಯಸ್, ವೆಂಕಟೇಶ್ ಮೂರ್ತಿ, ಚಂದ್ರಶೇಖರ್, ನರಸಿಂಹ, ಮಧುಸೂದನ್, ಆತ್ಮರಾಮ್, ಮಾಧವ್ ಭಟ್, ಸುಬ್ರಹ್ಮಣ್ಯಂ, ಬಿ ಮುರಳಿಧರ್, ಮತ್ತಿತರರು ಪ್ರಚಾರದಲ್ಲಿ ಭಾಗಿಯಾಗಿದ್ದರು.