ಮೈಸೂರು: ಮನುಷ್ಯ ಸಾಧನೆ ಮಾಡಿದಾಗ ಪ್ರಶಸ್ತಿಗಳು ಒಲಿದು ಬರುತ್ತವೆ, ಅದರೊಂದಿಗೆ ಹೆಚ್ಚಿನ ಜವಾಬ್ದಾರಿಗಳು ಕೂಡ ಸಾಧಕನನ್ನು ಅರಸಿ ಬರುತ್ತವೆ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷರಾದ ಕೆ ಬಿ ಲಿಂಗರಾಜು ಹೇಳಿದರು.
ಮೈಸೂರು ಜಿಲ್ಲಾಡಳಿತ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಆಚರಿಸಿದ ಸಂದರ್ಭದಲ್ಲಿ ಸಮಾಜ ಸೇವೆಯಿಂದ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಲಿಂಗರಾಜು ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುದಕ್ಕಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ಅಭಿನಂದನೆ ಸಲ್ಲಿಸಿದ ವೇಳೆ
ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದ ರು.
ಸಾಧನೆ ಎಂಬುದು ಸುಲಭದ ಮಾತಲ್ಲ ಸಾಧನೆಯು ಒಂದು ತಪಸ್ಸಿನ ಹಾಗೆ, ಹಲವು ಅಡೆತಡೆಯನ್ನು ಲೆಕ್ಕಿಸದೆ ದೃಢಸಂಕಲ್ಪ ಹಾಗೂ ಉತ್ತಮ ವಿಚಾರಗಳಿದ್ದಲ್ಲಿ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು ಎಂದು ಹೇಳಿದರು.
ಪ್ರಶಸ್ತಿಗಳು ಸಾಧಕನಿಗೆ ಸಮಾಜದಲ್ಲಿ ಗೌರವ ಕೊಡಿಸುವುದರ ಜೊತೆಗೆ ಜವಾಬ್ದಾರಿಗಳನ್ನು ಕೂಡ ಹೆಚ್ಚಿಸುತ್ತದೆ ಎಂದು ಲಿಂಗರಾಜು ತಿಳಿಸಿದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ,ಕೆ ಬಿ ಲಿಂಗರಾಜು ಅವರು ಹಲವು ವರ್ಷಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಮೈಸೂರು ನಾಗರಿಕರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಅಖಿಲ ಕರ್ನಾಟಕ ಒಕ್ಕಲಿಗ ಮಹಾಸಭಾ ಅಧ್ಯಕ್ಷ ಎನ್ ಬೆಟ್ಟೆಗೌಡ,ಮೈಸೂರು ಜಿಲ್ಲಾ
ಚಳವಳಿ ಗಾರರ ಸಂಘದ ಅಧ್ಯಕ್ಷ ಬಿ ಎ ಶಿವಶಂಕರ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್, ಎಸ್ ಎನ್ ರಾಜೇಶ್, ಸಚಿನ್ ನಾಯಕ್,ಭಾರತಿ ಮತ್ತಿತರರು ಲಿಂಗರಾಜು ಅವರಿಗೆ ಶುಭ ಕೋರಿದರು.
