ಹುಣಸೂರು: ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗದವರ ಮಹಾನ್ ನಾಯಕ ಡಿ ದೇವರಾಜ ಅರಸು ಅವರ ಪುಣ್ಯಸ್ಮರಣೆಯನ್ನು ಅವರ ಹುಟ್ಟೂರಿನಲ್ಲಿ ಜೂ.6 ರಂದು ಹಮ್ಮಿಕೊಳ್ಳಲಾಗಿದೆ.
ದೇವರಾಜ ಅರಸು ಅವರ ತವರೂರು ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಸರ್ವ ಜನಾಂಗದವರು ಸೇರಿ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಹುಣಸೂರು ತಾಲೂಕಿನ 334 ಹಳ್ಳಿಗಳ ಜನತೆ, ಎಲ್ಲಾ ಜನಾಂಗದ ನಾಯಕರು ಸೇರಿ ಅರಸು ಅವರ ಸಮಾಧಿ ಬಳಿ ಪುಣ್ಯತಿಥಿಯ ಪ್ರಯುಕ್ತ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.