ಅಂತರಿಕ್ಷ ವೈದ್ಯಕೀಯ ಸಂಶೋಧನೆಯತ್ತ ಜೆಎಸ್‌ಎಸ್ ಎಹೆಚ್‌ ಇಆರ್ ಮಹತ್ವದ ಹೆಜ್ಜೆ

Spread the love

ಮೈಸೂರು: ಅಂತರಿಕ್ಷ ವೈದ್ಯಕೀಯ ಸಂಶೋಧನೆಯತ್ತ ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿ ಮತ್ತು ಅದರ ಅಂಗಸಂಸ್ಥೆ ಜೆಎಸ್ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯ ಮಹತ್ವದ ಹೆಜ್ಜೆ ಇಟ್ಟಿದೆ.

ಜೆಎಸ್ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯ
ಊಟಿಯ ಫಾರ್ಮಸೂಟಿಕ್ಸ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ.ಗೌತಮ್ ರಾಜನ್ ರಷ್ಯಾದ ಮಾಸ್ಕೋದಲ್ಲಿನ Institute of Bio-medical Problems (IBMP-RAS), Russian Academy of Science & Spatial physiology ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಭಾರತ ಸರ್ಕಾರದ DHR-ICMR Overseas Fellowship Scheme ಯೋಜನೆಯಡಿ ಈ ತರಬೇತಿಯು Dr Vassilieva Galina Yu ಮಾರ್ಗದರ್ಶನದಲ್ಲಿ ನಡೆದಿದ್ದು ಡಾ ಗೌತಮ್ ರಾಜನ್ ಅವರು dry immersion, head-down tilt (HDT), vestibular adaptation and Mars Mission simulation ಸೇರಿದಂತೆ ಅಂತರಿಕ್ಷ ಶರೀರ ವಿಜ್ಞಾನದ ಪ್ರಮುಖ ಅಂಶಗಳಲ್ಲಿ ತಾಂತ್ರಿಕ ತರಬೇತಿಯನ್ನು ಪಡೆದಿದ್ದಾರೆ.

ಅಲ್ಲದೆ, ಡಾ ಗೌತಮ್ ರಾಜನ್ ಅವರು ROSCOSMOS (Russian state corporation responsible for the country’s space activities, including spaceflights, cosmonautics programs, and aerospace research) ಗೆ ಭೇಟಿ ನೀಡಿ, ಶೈಕ್ಷಣಿಕ ಉಪನ್ಯಾಸಗಳನ್ನು ನೀಡಿದ್ದು, BMP ಮತ್ತು JSS AHER ನಡುವಿನ ಭವಿಷ್ಯದ ಸಹಯೋಗಕ್ಕಾಗಿ MOU ಕುರಿತು ಚರ್ಚೆ ನಡೆಸಿದ್ದಾರೆ.

ಜೆಎಸ್‌ಎಸ್ ಎಹೆಚ್ ಇ ಆರ್ ನ ಕುಲಾಧಿಪತಿಗಳಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು, ನಿಜವಾದ ಶಿಕ್ಷಣ ಮತ್ತು ಸಂಶೋಧನೆಯು ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ, ಮಾನವೀಯತೆಗೆ ಉಪಕಾರಿಯಾಗುವ ಹೊಸ ಕ್ಷೇತ್ರಗಳಲ್ಲಿ ಬೆಳೆಯುವ ಅವಶ್ಯಕತೆ ಇದೆ. ಬಾಹ್ಯಾಕಾಶ ಔಷಧವು ನಮ್ಮ ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನವು ಮೇಳೈಸುವ ಒಂದು ಕ್ಷೇತ್ರವಾಗಿದೆ ಎಂದು ಹೇಳಿದ್ದಾರೆ.

ಜೆಎಸ್‌ಎಸ್ ಪರಿವರ್ತನ ವಿಜ್ಞಾನವನ್ನು ಮುಂಚೂಣಿಯಲ್ಲಿರಿಸುವ ಈ ಪ್ರಯತ್ನವನ್ನು ಬೆಂಬಲಿಸಲು ನನಗೆ ಸಂತೋಷವಾಗುತ್ತದೆ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಕುಲಪತಿ ಡಾ. ಬಸವನ ಗೌಡಪ್ಪ ಅವರು, ಅಂತರಿಕ್ಷ ಹಾಗೂ ವೈದ್ಯಕೀಯ ಸಂಶೋಧನೆಯ ಕ್ಷೇತ್ರಗಳಲ್ಲಿಯೂ ಭಾರತೀಯ ಸಂಸ್ಥೆಗಳು ಬೆಳೆಯಬೇಕಾದ ಸಮಯ ಬಂದಿದೆ, ಈ ಬೆಳವಣಿಗೆಯೊಂದಿಗೆ ಜೆಎಸ್ಎಸ್ ಎಹೆಚ್‌ ಇಆರ್ ಹೊಸ ಭಾಷ್ಯವನ್ನು ಬರೆಯುತ್ತಿರುವುದು ಸಂತಸದ ಸಂಗತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಡಾ ಗೌತಮ್ ರಾಜನ್ ಅವರ ಈ ತರಬೇತಿಯು ನಮ್ಮ ಸಂಶೋಧನಾ ಪರಿಕಲ್ಪನೆಯಲ್ಲಿ ಹೊಸ ಆಯಾಮಗಳನ್ನು ತೆರೆಯಲ್ಲಿದ್ದು ಜಾಗತಿಕ ಸಹಯೋಗ, ಜ್ಞಾನ-ವಿನಿಮಯ ಹಾಗೂ ಅಂತರಿಕ್ಷ ಔಷಧ ಶಾಸ್ತ್ರದಲ್ಲಿ ಭಾರತ ಮುನ್ನಡೆಯುವತ್ತ ಇದು ಸಹಕಾರಿಯಾಗಲಿದೆ ಎಂದು ‌ಹೇಳಿದ್ದಾರೆ‌

ಸಮಕುಲಾಧಿಪತಿ ಡಾ ಬಿ ಸುರೇಶ್ ಅವರು, ಅಂತರಿಕ್ಷ ವೈದ್ಯಕೀಯ ಸಂಶೋಧನೆಯ ಮೂಲಕ ನಾವು ಔಷಧ ವಿಜ್ಞಾನ ಶಾಸ್ತ್ರದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಜೆಎಸ್‌ಎಸ್ ಎಹೆಚ್‌ಇಆರ್ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಪ್ರತಿಕ್ರಿಯಿಸಿದ್ದಾರೆ.