ಜೋಶೇಪ್ ಲೋಬೊ ಅವರಿಗೆ ಶ್ರೇಷ್ಠ ರೈತ ರಾಷ್ಟ್ರ ಪ್ರಶಸ್ತಿ

Spread the love

ಹುಬ್ಬಳ್ಳಿ: ಕೃಷಿಯಲ್ಲಿ ಸಾಧನೆ ಮಾಡಿರುವ ಉಡುಪಿ ಜಿಲ್ಲೆಯ‌ ಜೋಶೇಪ್ ಲೋಬೊ ಅವರು ಶ್ರೇಷ್ಠ ರೈತ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಶ್ವವಿಜಯ ಸಂಸ್ಥೆಯ 20ನೇ ವಾರ್ಷಿಕೋತ್ಸವದ ಅಂಗವಾಗಿ ಫೆಬ್ರವರಿ 9ರಂದು ಹುಬ್ಬಳ್ಳಿ,ಬೈರಿ ದೇವರ ಕೊಪ್ಪಲು, ಸಂಗೊಳ್ಳಿ ರಾಯಣ್ಣ ನಗರದ
ಡಾ. ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ
ಜೋಶೇಪ್ ಲೋಬೊ ಅವರಿಗೆ ಶ್ರೇಷ್ಠ ರೈತ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಈಗಾಗಲೇ ಕೃಷಿ ಸಾಧನೆಯಲ್ಲಿ ಹಲವಾರು ಪ್ರಶಸ್ತಿಗಳನ್ನ ಅವರು ಮುಡಿಗೇರಿಸಿಕೊಂಡಿದ್ದಾರೆ.ಇದೀಗ ಶ್ರೇಷ್ಠ ರೈತರ ರಾಷ್ಟ್ರ ಪ್ರಶಸ್ತಿಯನ್ನು ಪಡೆಲಿದ್ದಾರೆ.