ಜೆಜೆಎಂಪಿ ಮುಖ್ಯಸ್ಥ ನಕ್ಸಲ್ ಪಪ್ಪು ಲೋಹ್ರಾ,ಪ್ರಭಾತ್‌ ಗಂಜು ಎನ್ಕೌಂಟರ್

Spread the love

ರಾಂಚಿ: ಜಾರ್ಖಂಡ್‌ನ ಲತೇಹಾರ್‌ ಜಿಲ್ಲೆಯಲ್ಲಿ ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಮೂವರು ಪ್ರಮುಖ ನಕ್ಸಲ್‌ ನಾಯಕರನ್ನು ಎನ್‌ಕೌಂಟರ್‌ ಮಾಡಲಾಗಿದೆ.

ಶನಿವಾರ ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಕಾರ್ಯಚರಣೆಯಲ್ಲಿ ನಕ್ಸಲ್ ದಂಗೆಕೋರ ಸಂಘಟನೆ ಜಾರ್ಖಂಡ್ ಜನ ಮುಕ್ತಿ ಪರಿಷತ್ ನ ಇಬ್ಬರು ಹಾಗೂ ಮತ್ತೊಬ್ಬ ನಕ್ಸಲ ಬಲಿಯಾಗಿದ್ದಾರೆ.

ಮೃತರಲ್ಲಿ ಪಪ್ಪು ಲೋಹ್ರಾನ ತಲೆಗೆ 10 ಲಕ್ಷ ರೂ. ಹಾಗೂ ಪ್ರಭಾತ್‌ ಗಂಜು ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ನಕ್ಸಲರು ಇರುವಿಕೆ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಆಧಾರದ ಮೇಲೆ ಜಂಟಿ ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿದ್ದವು. ಭೀಕರ ಗುಂಡಿನ ಚಕಮಕಿಯ ಸಮಯದಲ್ಲಿ ಮೂವರು ಹತರಾಗಿದ್ದಾರೆ.

ಈ ವೇಳೆ ಒಂದು ಐಎನ್‌ಎಸ್‌ಎಎಸ್ ರೈಫಲ್ ವಶಪಡಿಸಿಕೊಳ್ಳಲಾಗಿದ್ದು ಕಾರ್ಯಚರಣೆ ಮುಂದುವರಿದಿದೆ.