(ವರದಿ:ಸಿದ್ದರಾಜು ಕೊಳ್ಳೇಗಾಲ)
ಕೊಳ್ಳೇಗಾಲ: ಕ್ಷೇತ್ರಾದ್ಯಂತ ಪ್ರವಾಸ ಕಾರ್ಯಕ್ರಮ ಮಾಡಿ ಪಕ್ಷ ಸಂಘಟನೆ ಮಾಡಿ ದರೆ ಮುಂದಿನ ದಿನಗಳಲ್ಲಿ ಜನ ನಿಮ್ಮ ಕೈ ಹಿಡಿಯಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಗೂ ಶಾಸಕರಾ ಆದ ಎಂ. ಆರ್. ಮಂಜುನಾಥ್ ಕಾರ್ಯಕರ್ತರನ್ನು
ಹುರಿದುಂಬಿಸಿದರು.
ಇದರಿಂದ ಮುಂದಿನ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ತಿಳಿಹೇಳಿದರು.
ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ನಡೆದ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ)ದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದು ಸರಳವಾದ ಕಾರ್ಯಕ್ರಮವಾದರೂ ಪಕ್ಷ ಸಂಘಟನೆಗೆ ದಿಕ್ಸೂಚಿಯಾಗಿದೆ. ಮೂರು ತಾಲ್ಲೂಕುಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ಕೊಳ್ಳೇಗಾಲ, ಹಾಗಾಗಿ ಅಧಿಕಾರ ವ್ಯಾಪ್ತಿ ಹೆಚ್ಚಾಗಿದೆ. ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಅನ್ಯಾಯವಾದಲ್ಲಿ ನೀವು ಧ್ವನಿಯಾಗಬೇಕಿದೆ,ಆಗ ಸಂಘಟನೆ ಗಟ್ಟಿಯಾಗುತ್ತದೆ, ಪಕ್ಷ ಸಂಘಟನೆಗೆ ಹೆಚ್ಚು ಸಮಯ ಕೊಡಿ. ಬೂತ್ ಮಟ್ಟದಲ್ಲಿ ಯುವಕರನ್ನು, ಮಹಿಳಾ ಸಂಘಟನೆಗಳನ್ನು ಪ್ರೊತ್ಸಾಹಿಸಿ ಇದರಿಂದ ಪಕ್ಷ ಬಲಿಷ್ಠಗೊಳ್ಳಲಿದೆ ಎಂದು ಹೇಳಿದರು.
ಪುಟ್ಟಸ್ವಾಮಿಯವರು ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿರುವುದರಿಂದ ಪಕ್ಷ ಸಂಘಟನೆಗೆ ಆನೆಬಲ ಬರಲಿದೆ ಎಂದು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಗೂ ಪರಾಜಿತ ಅಭ್ಯರ್ಥಿ ಬಿ.ಪುಟ್ಟಸ್ವಾಮಿ ಅವರು, ಕ್ಷೇತ್ರದಲ್ಲಿ ಪಕ್ಷವನ್ನು ಬಲಿಷ್ಠವಾಗಿ, ಸಧೃಡವಾಗಿ ಸಂಘಟನೆ ಮಾಡಬೇಕೆಂದು ಪಣತೊಟ್ಟಿದ್ದೇವೆ ಅದಕ್ಕಾಗಿ ಜಿಲ್ಲಾಧ್ಯಕ್ಷರು ಹಾಗೂ ಶಾಸಕರು ಆದ ಎಂ. ಆರ್. ಮಂಜುನಾಥ್ ಅವರ ನೇತೃತ್ವದಲ್ಲಿ ಎಲ್ಲಾ ತಾಲೂಕುಗಳು ಹಾಗೂ ಹೋಬಳಿಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ ನಂತರ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಂತೇಮರಳ್ಳಿ ಭಾಗದಲ್ಲಿ 40, ಯಳಂದೂರು ತಾಲ್ಲೂಕಿನಲ್ಲಿ 42 ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ 32 ಗ್ರಾಮಗಳಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಪಕ್ಷ ಸಂಘಟಿಸಿ ಚುನಾವಣೆ ಎದುರಿಸಿದ್ದರಿಂದ ಹಿನ್ನಡೆಯಾಯಿತು. ಈ ಭಾರಿ ಪಕ್ಷ ಸಂಘಟನೆ ಮಾಡಿ ಮುಂದಿನ ಚನಾವಣೆಗೆ ಸಜ್ಜಾಗಿ ಕ್ಷೇತ್ರದಲ್ಲಿ ಅಧಿಕಾರ ಹಿಡಿಯ ಬೇಕಿದೆ ಅದಕ್ಕಾಗಿ ಕಾರ್ಯಕರ್ತರು ಮುಂದಾಗಬೇಕೆಂದು ಕರೆನೀಡಿದರು.
ಈ ವೇಳೆ ನೂತನ ಪದಾಧಿಕಾರಿಗಳಾಗಿ ನೇಮಕವಾಗಿರುವ ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಮಾಂಬಳ್ಳಿ ರಾಜೇಶ್, ಪ್ರಧಾನ ಕಾರ್ಯದರ್ಶಿ ಸಿದ್ದಯ್ಯನಪುರ ರಾಚಯ್ಯ, ಉಪಾಧ್ಯಕ್ಷ ಕುಣಗಳ್ಳಿ ಸುಂದರ್, ಗೌರವ ಅಧ್ಯಕ್ಷ ಕಜ್ಜಿಹುಂಡಿ ಕಾಂತಣ್ಣ, ಬಿ.ಎಸ್.ಪಿ ತೊರೆದು ಜೆಡಿಎಸ್ ಸೇರ್ಪಡೆ ಗೊಂಡಿರುವ ಸ್ಥಳೀಯ ನಗರಸಭಾ ಸದಸ್ಯೆ ಜಯಮೇರಿ ಹಾಗೂ ಯುವ ಘಟಕ ಅಧ್ಯಕ್ಷ ಅಜಯ್, ಯಳಂದೂರು ತಾಲ್ಲೂಕು ಅಧ್ಯಕ್ಷ ಕೆಸ್ತೂರ್ ಆನಂದ್, ಪ್ರಧಾನ ಕಾರ್ಯದರ್ಶಿ ಅಂಬಳೆ ರವೀಶ್, ಯುವಘಟಕದ ಅಧ್ಯಕ್ಷ ಕಾರ್ತೀಕ್, ಸಂತೇಮರಳ್ಳಿ ಹೋಬಳಿ ಅಧ್ಯಕ್ಷ ಎಂ.ಪಿ. ಶಂಕರಪ್ಪ, ಯುವ ಘಟಕದ ಅಧ್ಯಕ್ಷ ಸಿದ್ದರಾಜು, ಕ್ಷೇತ್ರ ಸೂಚಕ ಶಶಿ ಅವರನ್ನು ನೇಮಿಸಿ ಎಲ್ಲಾ ಪದಾಧಿಕಾರಿಗಳಿಗೂ ಪಕ್ಷದ ಧ್ವಜ ನೀಡುವ ಮೂಲಕ ಪದಗ್ರಹಣ ಮಾಡಿದರು.
ಸಮಾರಂಭದಲ್ಲಿ ಚಾ.ನಗರ ಕ್ಷೇತ್ರ ಪರಾಜಿತ ಅಭ್ಯರ್ಥಿ ಆಲೂರು ಶಿವಮಲ್ಲು, ಗುಂಡ್ಲುಪೇಟೆ ಕ್ಷೇತ್ರ ಪರಾಜಿತ ಕಡಬೂರು ಮಂಜು, ಮುಖಂಡರಾದ ಕಂದಳ್ಳಿ ಶಂಕರ್, ಆಲ್ಕೆರೆ ಮಹದೇವ, ಶಿವಮಲ್ಲೇಗೌಡ, ಹನೂರು ಮಹದೇವ ಹನೂರು ವಿಜಯ್ ಕುಮಾರ್, ಶಶಿಶೇಖರ್ ಸೇರಿದಂತೆ ಇನ್ನಿತರರು ಹಾಜರಿದ್ದರು.