ಕಾಂಗ್ರೆಸ್ ನವರು ತಮ್ಮ ಶಾಸಕರನ್ನು ಉಳಿಸಿಕೊಳ್ಳಲಿ-ನಿಖಿಲ್ ಕುಮಾರಸ್ವಾಮಿ

Spread the love

ಯಾದಗಿರಿ: ನಮ್ಮ ಪಕ್ಷದ‌ ಯಾವ ಶಾಸಕರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವದಿಲ್ಲ,
ಕಾಂಗ್ರೆಸ್ ನವರು ಮೊದಲು ತಮ್ಮ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್,
ಕಾಂಗ್ರೆಸ್ ಶಾಸಕ ಉದಯ್ ಅವರು ಜೆಡಿಎಸ್ ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆಂದು ಹೇಳಿದಕ್ಕೆ ಈ ರೀತಿ ತಿರುಗೇಟು ನೀಡಿದರು.

ಕಾಂಗ್ರೆಸ್ ಶಾಸಕರೇ ಈಗ ಸಾರ್ವಜನಿಕ ವಲಯದಲ್ಲಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ,ಜನತಾದಳದ ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆಂದು ಹೇಳುತ್ತಿದ್ದಾರೆ,
ಜೆಡಿಎಸ್ ಪಕ್ಷದ ಶಾಸಕರೆಲ್ಲ ನಮ್ಮ ಕುಟುಂಬದ ಸದಸ್ಯರಿದ್ದ ಹಾಗೇ,
ಎಲ್ಲಾ ಜೆಡಿಎಸ್ ಶಾಸಕರು ನಿರಂತರವಾಗಿ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ಶಾಸಕರಿಗೆ ಬರುವ ಆಫರ್ ಗಳನ್ನು ಶಾಸಕರು ನಮ್ಮ ಗಮನಕ್ಕೆ ತರುತ್ತಾರೆ,
ಕಾಂಗ್ರೆಸ್ ಮೊದಲು ತಮ್ಮವರನ್ನು ಉಳಿಸಿಕೊಳ್ಳಲಿ,ತಮ್ಮ ಸರಕಾರದ ಕುರ್ಚಿ ಭದ್ರಪಡಿಸಿಕೊಳ್ಳಬೇಕಿದೆ,
ಕಾಂಗ್ರೆಸ್ ಶಾಸಕರೇ ಕಾಂಗ್ರೆಸ್ ಬಿಟ್ಟು ಹೋಗುವ ವಾತಾವರಣ ಸೃಷ್ಟಿಯಾಗಿದೆ,
ಇನ್ನು ಜೆಡಿಎಸ್ ನವರು ಕಾಂಗ್ರೆಸ್ ಯಾಕೆ ಹೋಗುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.