ಮೈಸೂರು: ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗ ಹಾಗೂ ಆಟೋ ಚಾಲಕರ ಅಭಿಮಾನಿ ಬಳಗದ ವತಿಯಿಂದ ಜೆಡಿಎಸ್ ಯುವ ಮುಖಂಡರು ಮತ್ತು ಎಚ್ ಡಿ ಕುಮಾರಸ್ವಾಮಿ ಬಳಗದ ನಗರ ಪ್ರಧಾನ ಕಾರ್ಯದರ್ಶಿ ಸತೀಶ್ ಗೌಡ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.

ಸತೀಶ್ ಗೌಡರಿಗೆ ಪೇಟ ತೊಡಿಸಿ,ಶಾಲು ಹೊದಿಸಿ,ಮಣಿಗಳ ಹಾರ ಹಾಕಿ ಮುಖಂಡರುಗಳು ಸಂತಸಪಟ್ಟರು.

ಈ ವೇಳೆ ಕೇಕ್ ಕತ್ತರಿಸಿ ಸತೀಶ್ ಗೌಡರಿಗೆ ತಿನ್ನಿಸಿ, ಎಲ್ಲರಿಗೂ ವಿತರಿಸಿ ಅಭಿಮಾನಿಗಳು ಸಂಭ್ರಮಿಸಿದರು.

ಆ ಸಂದರ್ಭದಲ್ಲಿ ಜೆಡಿಎಸ್ ಸಮಾಜ ಸೇವಾ ಜಿಲ್ಲಾ ಯುವ ವಿಭಾಗದ ಅಧ್ಯಕ್ಷರೂ ಎಚ್ ಡಿ ಕುಮಾರಸ್ವಾಮಿ ಅಭಿಮಾನ ಬಳಗದ ನಗರ ಅಧ್ಯಕ್ಷರಾದ ಆನಂದ್ ಗೌಡ ಕೆ ಆರ್ ಮಿಲ್ ಕಾಲೋನಿ, ಜೆಡಿಎಸ್ ನಗರ ಸಂಘಟನಾ ಕಾರ್ಯದರ್ಶಿ ಮತ್ತು ಎಚ್.ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ನಗರ ಸಂಘಟನಾ ಕಾರ್ಯದರ್ಶಿ ಕೋದಂಡ ಬಂಬೂ ಬಜಾರ್, ಮೆದರ್ ಬ್ಲಾಕ್, ಸತೀಶ್ ಗೌಡ ಅವರ ಸ್ನೇಹಿತರುಗಳಾದ ಶ್ರೀಧರ್,ಪ್ರದೀಪ್ ಗೌಡ,ಸಿದ್ದಪ್ಪ,ವೆಂಕಟೇಶ್,
ಶ್ರೀನಿವಾಸ್,ಕಿರಣ್,ವಿಜಯ್,ವೇಣು,ನಟರಾಜ್,ಕುಮಾರ್,ಉದಯ್,ಪೆರುಮಾಳ್, ರಮೇಶ್ ನಾಯ್ಡು,ಮಂಜು ಗ್ಯಾಸ್, ಸುಂದರ್,ನಂದೀಶ್,ಸುರೇಶ್,ಭಾಸ್ಕರ್ ಮತ್ತಿತರರು ಪಾಲ್ಗೊಂಡಿದ್ದರು.
