ಸೆ.16 ರಂದು ನಾಡಪ್ರಭು ಶ್ರೀ ಕೆಂಪೇಗೌಡರ 515ನೇ ಜಯಂತೋತ್ಸವ

Spread the love

ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಸೆ.16‌ ರಂದು ಪದಗ್ರಹಣ ಹಾಗೂ ನಾಡಪ್ರಭು ಶ್ರೀ ಕೆಂಪೇಗೌಡರ 515ನೇ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ. ಜಿ ಗಂಗಾಧರ್ ತಿಳಿಸಿದರು.

ಈ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಬೆಳಗ್ಗೆ 10 ಗಂಟೆಗೆ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಿಂದ ಕಲಾಮಂದಿರದವರೆಗೆ, ಸುಮಾರು 10-12 ಕಲಾತಂಡಗಳು ನಾಡಪ್ರಭು ಶ್ರೀ ಕೆಂಪೇಗೌಡರ ರಥದೊಂದಿಗೆ ಮೆರವಣಿಗೆ ಹೊರಡಲಿದೆ ಎಂದು ತಿಳಿಸಿದರು.

ಪೂಜ್ಯ ಜಗದ್ಗುರುಗಳು ಹಾಗೂ ಅತಿಥಿ ಗಣ್ಯರು ಮೆರವಣಿಗೆ ಮುಖಾಂತರ ಕಾರ್ಯಕ್ರಮ ನಡೆಯಲಿರುವ ಕಲಾಮಂದಿರಕ್ಕೆ ತಲುಪಲಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಜಗದ್ಗುರುಗಳಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ವಹಿಸಲಿದ್ದು, ವಿವಿಧ ಸಮುದಾಯದ ಸಾಧಕರಿಗೆ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಸಮುದಾಯದ ಸುಮಾರು ಆರು ದಂಪತಿಗಳಿಗೆ ಒಕ್ಕಲಿಗ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಹಾಗೂ ರೈತರಿಗೆ ಸುಮಾರು 1001 ತೆಂಗಿನ ಸಸಿಗಳನ್ನು ಅಂದು ವಿತರಿಸಲಾಗುವುದು ಎಂದು ತಿಳಿಸಿದರು.

ಅಂದು 10 ವರ್ಷದ ಒಳಗಿನ ಸಮುದಾಯದ ಮಕ್ಕಳಿಗೆ ನಾಡಪ್ರಭು ಶ್ರೀ ಕೆಂಪೇಗೌಡರ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ ಮತ್ತು ಬೆಳಿಗ್ಗೆ ಏಳರಿಂದ ಒಂಬತ್ತು ಗಂಟೆವರೆಗೆ ರಂಗೋಲಿ ಸ್ಪರ್ಧೆಯನ್ನು ಸಹ ಕಲಾಮಂದಿರದ ಆವರಣದಲ್ಲಿ ಏರ್ಪಡಿಸಲಾಗಿದೆ. ಆಸಕ್ತರು 7899481039 ಈ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಬಹುದು ಎಂದು ಗಂಗಾಧರ್ ವಿವರಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಗೋವಿಂದೇಗೌಡ, ಕಾರ್ಯಾಧ್ಯಕ್ಷ ಗೋಪಾಲಯ್ಯ, ಉಪಾಧ್ಯಕ್ಷ ಶಿವಲಿಂಗಯ್ಯ, ಜಿಲ್ಲಾ ಗೌರವಾಧ್ಯಕ್ಷ ಡಾ. ಸಿ ವೈ ಶಿವೇಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹಾಗೂ ಮಹಿಳಾ ಅಧ್ಯಕ್ಷೆ ಲತಾ ರಂಗನಾಥ್, ನಿರ್ದೇಶಕಿ ಲಕ್ಷ್ಮೀದೇವಿ ಎಸ್ ಉಪಸ್ಥಿತರಿದ್ದರು.