ಮೈಸೂರು: ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನೂತನ ನಿರ್ದೇಶಕರಾಗಿ ಬಿ ದಿನೇಶ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಬಿ ದಿನೇಶ್ ಅವರ ಮೈಸೂರಿನ ತೊಣಚಿಕೊಪ್ಪಲ್ ನಿವಾಸಕ್ಕೆ ವಿವಿಧ ಗಣ್ಯರು ಭೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ನಿಕಟ ಪೂರ್ವ ರಾಜ್ಯಾಧ್ಯಕ್ಷ ಬಿ ಸುಬ್ರಮಣ್ಯ, ಸಮಾಜ ಸೇವಕ ಬಿ ಮರಿಯಪ್ಪ, ಕಾರಾಗೃಹ ಮಂಡಳಿ ಸದಸ್ಯ ಪವನ್ ಸಿದ್ದರಾಮ, ಕಾಂಗ್ರೆಸ್ ಮುಖಂಡ ಹೇಮಂತ್, ದ್ವಿತೀಯ ದರ್ಜೆ ಗುತ್ತಿಗದಾರರಾದ ಗೌತಮ್ ಮತ್ತು ಶಿವು ಅವರುಗಳು ಬಿ ದಿನೇಶ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿ ಶುಭ ಕೋರಿದರು.