ಜನಿವಾರ ತುಂಡರಿಸಿದ ವಿಚಾರ: ಮೈಸೂರು‌ ಬ್ರಾಹ್ಮಣ ಯುವ ವೇದಿಕೆ ಬೃಹತ್ ಪ್ರತಿಭಟನೆ

Spread the love

ಮೈಸೂರು: ವಿದ್ಯಾರ್ಥಿಗೆ ಜನಿವಾರ ತುಂಡರಿಸಿದ ವಿಚಾರ ಖಂಡಿಸಿ
ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿಎಸ್‌ ಶ್ರೀವತ್ಸ ಅವರ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬ್ರಾಹ್ಮಣ ಸಮುದಾಯದ 300ಕ್ಕೂ ಹೆಚ್ಚು ಮಂದಿ ಅಗ್ರಹಾರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ವಾಣಿವಿಲಾಸ ರಸ್ತೆ ಮುಖಾಂತರ ಕಾಲ್ನಡಿಗೆಯಲ್ಲಿ ಸಾಗಿ ಕೃಷ್ಣರಾಜ ಪೋಲಿಸ್ ಠಾಣೆಗೆ ತೆರಳಿ ಅಧಿಕಾರಿಗಳಿಗೆ ದೂರು ದಾಖಲಿಸಿದರು,

ಶಿವಮೊಗ್ಗ ನಗರದಲ್ಲಿ ಸಿ.ಇ.ಟಿ ಪರೀಕ್ಷೆ ಪ್ರವೇಶ ಸಂಧರ್ಭದಲ್ಲಿ ವಿದ್ಯಾರ್ಥಿಗೆ ಜನಿವಾರ ತುಂಡರಿಸಿರುವ ವಿಚಾರ ಮತ್ತು ಬೀದರ್ ಜಿಲ್ಲೆಯಲ್ಲಿ ವಿದ್ಯಾರ್ಥಿಗೆ ಜನಿವಾರ ತೆಗೆದು ಬರಬೇಕೆಂದು ತಾಕೀತು ಮಾಡಿದ್ದನ್ನು ಈ‌ ವೇಳೆ ವಿರೋಧಿಸಲಾಯಿತು

ಹೀಗೆ ಮಾಡಿರುವುದರಿಂದ ಬ್ರಾಹ್ಮಣ ಸಮುದಾಯದ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಂದಿದ್ದು ರಾಜ್ಯ ಸರ್ಕಾರದ ಅಧಿಕಾರಿಗಳ ನಡೆ ಖಂಡನೀಯ ತಪ್ಪು ಮಾಡುದವರನ್ನು ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿ ವಿಪ್ರ ಸಮುದಾಯದವರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಶಾಸಕ ಟಿ.ಎಸ್ ಶ್ರೀವತ್ಸ ಅವರು ಮಾತನಾಡಿ ಜನಿವಾರ ಎನ್ನುವುದು ಬ್ರಾಹ್ಮಣರ ಆಸ್ಮಿತೆ, ವಿಪ್ರ ಕುಟುಂಬದ ಪ್ರತಿಯೊಬ್ಬ ಗಂಡು ಮಗುವಿಗೆ 8 ವರ್ಷದಲ್ಲೆ ಬ್ರಹ್ಮೋಪದೇಶ ಮಾಡಿ ಗುರುಹಿರಿಯರು ಸಮಾಜವನ್ನು ರಕ್ಷಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವಂತೆ ಗಾಯತ್ರಿ ಮಂತ್ರದ ಮೂಲಕ ಉಪದೇಶ ಮಾಡಿರುತ್ತಾರೆ ಎಂದು ಹೇಳಿದರು.

ಭಾರತದ ಪ್ರತಿಯೊಂದು ಜಾತಿ ಜನಾಂಗದ ಆಚರಣೆ ಸ್ವಾತಂತ್ರ್ಯತೆಗೆ ಸಮಾನ ಹಕ್ಕಿದೆ. ಆದರೆ ಶಿವಮೊಗ್ಗ, ಬೀದರ್ ಇಂಜನಿಯರಿಂಗ್ ಪರೀಕ್ಷೆಯಲ್ಲಿ ಜನಿವಾರ ಧರಿಸಿ ಬಂದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ನೀಡಿದ ಕಿರುಕುಳ ಜನಿವಾರ ಕಸಿದಿರುವ ವಿಚಾರ ಇಡೀ ಬ್ರಾಹ್ಮಣ ಜನಾಂಗದ ಆಚರಣೆ ನಂಬಿಕೆ ಘನತೆಗೆ ಧಕ್ಕೆ ಬಂದಿದ್ದು ಅಪಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದಲ್ಲಿ ಅರ್ಚಕ ಪೌರೋಹಿತ್ಯ ಅಡುಗೆ ವೃತ್ತಿ ಮೇಲೆ ಅವಲಂಭಿತವಾಗಿರುವ ಬ್ರಾಹ್ಮಣರಿಗೆ ಮನೆಯಿಂದ ಹೊರಬಂದರೆ ಇನ್ನೇನಾದರೂ ತೊಂದರೆ ಕಾದಿದೆಯೊ ಎಂಬ ಭಯ ಕಾಡುತ್ತಿದೆ, ಹಾಗಾಗಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಕರ್ನಾಟಕ ಶಿಕ್ಷಣ ಇಲಾಖೆ ಈ ಕೂಡಲೇ ಕಾರಣರಾದ ಸರ್ಕಾರಿ ಅಧಿಕಾರಿಗಳನ್ನ ಬಂಧಿಸಿ ಕ್ರಮಕೈಗೊಂಡು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಸಮಾಜದಲ್ಲಿ ಶಾಂತಿ ಕದಡುವ ದುಷ್ಕೃತ್ಯಕ್ಕೆ ಕಾರಣರಾಗುವ ಕಿಡಿಗೇಡಿಗಳಿಗೆ ಇದೊಂದು ಎಚ್ಚರಿಕೆಯ ಪಾಠವಾಗಬೇಕಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಒಂದು ವೇಳೆ ನಿರ್ಲಕ್ಷಿಸಿದರೆ ರಾಜ್ಯಾದ್ಯಂತ ಉಘ್ರ ಹೋರಾಟ ಮಾಡಲಾಗುವುದು ಎಂದು ಶ್ರೀವತ್ಸ ಎಚ್ಚರಿಕೆ ನೀಡಿದರು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿಗಳಾದ ಡಿ ಟಿ ಪ್ರಕಾಶ್, ಡಾ. ಲಕ್ಷ್ಮಿ,ಮೇಲುಕೋಟೆ ವಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ,
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಎಚ್‌ ಜಿ ಗಿರಿಧರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಎಂ ಡಿ ಪಾರ್ಥಸಾರಥಿ,ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರವಿ ಶಾಸ್ತ್ರಿ, ಯೋಗ ನರಸಿಂಹ (ಮುರುಳಿ), ಕಡಕೋಳ ಜಗದೀಶ್, ಜಯ ಸಿಂಹ, ಶ್ರೀಧರ್, ಕೆ ಎಂ ನಿಶಾಂತ್, ವಿಜಯ್ ಕುಮಾರ್, ಶ್ರೀನಿವಾಸ್ ಬಾಶ್ಯಮ್, ಸುಧೀಂದ್ರ ಪ್ರಶಾಂತ್, ಟಿ ಎಸ್ ಅರುಣ್, ಸುಚೇಂದ್ರ, ರಂಗನಾಥ್,ರಾಜಗೋಪಾಲ್, ಶ್ರೀನಿವಾಸ ಪ್ರಸಾದ್,ಪುಟ್ಟಸ್ವಾಮಿ, ವಾಸದೇವಮೂರ್ತಿ,ಶ್ರೀಕಾಂತ್ ಕಶ್ಯಪ್ ಗುರುರಾಜ್,ಎಚ್ ಎನ್ ಯದುನಾಥ್, ನಾಗೇಶ್, ವಿಜ್ಞೇಶ್ವರ ಭಟ್, ಸುದರ್ಶನ್, ಹಾಗೂ ಮಹಿಳಾ ಮುಖಂಡರು
ಮತ್ತು ವಿಪ್ರ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.