ಮೈಸೂರು: ಬೋಗಾದಿಯ ರವಿಶಂಕರ್ ಲೇಔಟ್ ನಲ್ಲಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ 537ನೇ ಕನಕದಾಸ ಜಯಂತಿ ಆಚರಿಸಲಾಯಿತು.
ಈ ವೇಳೆ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ನಂತರ ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ ಅವರು ಎಲ್ಲರಿಗೂ ಸಿಹಿ ವಿತರಿಸಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಶ್ರೀಕಾಂತ್, ಮಂಜಣ್ಣ, ಪುಟ್ಟ ನಿಂಗಪ್ಪ, ಪ್ರಭುಲಿಂಗಪ್ಪ, ಅಶ್ವಿನಿ, ರಾಣಿ ಮತ್ತಿತರರು ಹಾಜರಿದ್ದರು.