ಪ್ರಥಮ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದ ದೃವ ಸರ್ಜಾ

Spread the love

ಬೆಂಗಳೂರು: ಬೆಂಗಳೂರಿನಲ್ಲಿ ಇದೇ 25 ರಂದು ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರ ಘಟಕ ರಾಜ್ಯ ಪ್ರಥಮ ಜಾನಪದ ಸಮ್ಮೇಳನ ಹಮ್ಮಿಕೊಂಡಿದೆ.

ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರ ಘಟಕದ ವತಿಯಿಂದ ಇದೆ 25 ರಂದು
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಥಮ ಜಾನಪದ ಸಮ್ಮೇಳನ ನಡೆಯಲಿದ್ದು,ಭಾನುವಾರ ಇದರ ಆಹ್ವಾನ ಪತ್ರಕೆಯನ್ನು ಖ್ಯಾತ ನಟ ದ್ರುವ ಸರ್ಜಾ ಬಿಡುಗಡೆಗೊಳಿಸಿದರು.

ಈ ವೇಳೆ ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷ ಡಾ. ಜಾನಪದ ಎಸ್ ಬಾಲಾಜಿ, ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರ ಘಟಕದ ಅಧ್ಯಕ್ಷರ ರ. ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ಬೆಂಗಳೂರು ಕೇಂದ್ರ ಜಿಲ್ಲೆ. ಡಾ. ರಿಯಾಜ್ ಪಾಷಾ,ಮಂಡ್ಯ ಅಧ್ಯಕ್ಷ ಡಾ. ವಿಜಯ್ ಕೊಪ್ಪ, ರಾಮನಗರ ಅಧ್ಯಕ್ಷ ಕಾಂತಪ್ಪ ಕೆ.ಸಿ, ಗೋವಿಂದರಾಜನಗರ ಮಹಿಳಾ ಘಟಕದ ಅಧ್ಯಕ್ಷೆ ಸವೀತಾ ಕುಮಾರ್, ಕಾರ್ಯದರ್ಶಿ ಅನಿತಾ, ಸಂಚಾಲಕಿ ವಾಣಿ, ಗೋವಿಂದರಾಜನಗರ ಪದಾಧಿಕಾರಿಗಳಾದ ಮಂಜುನಾಥ್, ಅಶ್ವಥನಾರಾಯಣ,ರಾಮಾಂಜಿನೇಯ, ಕನ್ನಯ್ಯ ಶಂಕರ್, ಅಂತರಾಷ್ಟ್ರೀಯ ಗಾಯಕ ಜಾನಪದ ಗಂಗಣ್ಣ ಬಿ ಸಿ, ಜಾನಪದ ಯುವ ಬ್ರಿಗೇಡ್ ಬೆಂಗಳೂರು ಜಿಲ್ಲಾ ಸಂಚಾಲಕ ರೋಹಿತ್ ರಘು ಗೌಡ, ಸಾಗರ ತಾಲ್ಲೂಕಿನ ಸಂಚಾಲಕ ಮೇಲ್ವಿನ್ ಗೊಳೋಣಸ್ವಿಸ್, ಉಜರೆ ಸಂಚಾಲಕ ಹರ್ಷಲ್ ಮತ್ತಿತರರು ಉಪಸ್ಥಿತರಿದ್ದರು.