ಬೆಂಗಳೂರು: ಜಾನಪದದಲ್ಲಿ ಜೀವನ ಮೌಲ್ಯ ಹಾಗೂ ನೈತಿಕತೆ ಅಡಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.
ಬೆಂಗಳೂರು ಜಯನಗರ ನಾಲ್ಕನೇ ಹಂತ ಬಿಇಎಸ್ ಪದವಿ ಕಾಲೇಜು ವತಿಯಿಂದ ಏರ್ಪಡಿಸಿದ ಬಿ ಇ ಎಸ್ ಜಾನಪದ ಉತ್ಸವ 2025ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದಕ್ಕೆ ಚೌಕಟ್ಟು ಹಾಗೂ ಇತಿಮಿತಿ ಇಲ್ಲ, ಇದು ಮಹಿಳಾ ಪ್ರಧಾನವಾದದ್ದು, ಯುವ ಜನರು ಜಾನಪದದಿಂದ ಗುಡಿಸುವ ಮನಸ್ಥಿತಿಯನ್ನು ಕಲಿಯುತ್ತಾರೆ, ಪಾಶ್ಚಾತ್ಯ ಸಂಸ್ಕೃತಿಯಿಂದ ಬೇರ್ಪಡಿಸುವ ಮನಸ್ಥಿತಿಯನ್ನು ಕಲಿಯಬೇಕಾಗುತ್ತದೆ, ಜಾನಪದದ ಆಯ್ಕೆಯ ಬಹುಮುಖ್ಯ, ಪ್ರದರ್ಶನ ಕಲೆಗಳು ಮತ್ತು ಮೌಖಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಬಳಕೆ ಮಾಡುವ ಕರ್ತವ್ಯವು ಜನತೆ ಮೇಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಾಲ್ಯದಿಂದಲೇ ಬಿತ್ತುವ ವಿಶ್ವವಿದ್ಯಾಲಯ ಜಾನಪದವಾಗಿದೆ, ಜಾನಪದದ ಪರಿಚಯವನ್ನು ಮಾಡುತ್ತಿರುವ ಬಿ ಇ ಎಸ್ ಕಾಲೇಜಿನ ಆಡಳಿತ ಮಂಡಳಿಯ ಕ್ರಿಯಾಶೀಲತೆ ಇತರೆ ಕಾಲೇಜಿನ ಆಡಳಿತ ಮಂಡಳಿಗೂ ಮಾದರಿ ಎಂದು ಡಾ.ಜನಪದ ಎಸ್ ಬಾಲಾಜಿ ತಿಳಿಸಿದರು.
ಬಿ ಎಂ ಶ್ರೀ ಪ್ರತಿಷ್ಠಾನದ ಅಧ್ಯಕ್ಷರ ಡಾ ಬೈರಮಂಗಲ ರಾಮೇಗೌಡ ಮಾತನಾಡಿ ಜಾನಪದ ಸಂಸ್ಕೃತಿ ಮತ್ತು ಪರಂಪರೆಯನ್ನು ಅವಲೋಕಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ, ಈ ದೆಸೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಜನಪದ ಉತ್ಸವಗಳನ್ನು ರಾಜ್ಯಾದ್ಯಂತ ಆಯೋಜಿಸುವಂತೆ ಸುತ್ತೋಲೆ ಹೊರಡಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಸಿ ಶಿವಲಿಂಗೇಗೌಡ ಮಾತನಾಡಿ ಇತ್ತೀಚಿನ ಯುವಜನರು ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿತರಾಗುತ್ತಿದ್ದಾರೆ,ಆದರೆ ಮೂಲ ಜಾನಪದವೇ ಪ್ರಧಾನವಾದದ್ದು ಇದನ್ನು ಯುವಜನರ ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿ ಎಸ್ ಎಸ್ ಪದವಿ ಕಾಲೇಜಿನ ಅಧ್ಯಕ್ಷರು ಕೆ.ಆರ್ ನಿರ್ಮಲ್ ಕುಮಾರ್ ಮಾತನಾಡಿ ಜಾನಪದ ಎಲ್ಲಾ ಕಡೆ ಇದೆ, ಇದೇ ಜಾನಪದ ಎಂಬ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕಾಗಿದೆ ಈ ದೆಸೆಯಲ್ಲಿ ಭರತ್ ವಿದ್ಯಾ ಸಂಸ್ಥೆ ಮುನ್ನಡೆಯಲಿದೆ ಎಂದು ಭರವಸೆ ನೀಡಿದರು.

ಜಾನಪದ ಉತ್ಸವದಲ್ಲಿ
ತೇಜಸ್ವಿನಿ ಮತ್ತು ತಂಡ ರಾಗಿ ಬೀಸೋ ಕಲ್ಲಿನ ಪದ, ಸುರೇಶ್ ಮತ್ತು ತಂಡ ಕಂಸಾಳೆ, ಪಟ್ಟದ ಕುಣಿತ ಧೀರೇಜ್ ಮತ್ತು ತಂಡ, ಹುಲಿ ವೇಷ ಸಂತೋಷ್, ಗೊರವರ ಕುಣಿತ ಕಮಲೇಶ್ ಮತ್ತು ತಂಡ, ಜನಪದ ಕಲರವ ಹರ್ಷ ಮತ್ತು ತಂಡ, ಕೋಡವ ನೃತ್ಯ ಅನುಷಾ ಮತ್ತು ತಂಡ, ಜನಪದ ಗೀತೆ ನಂದಿನಿ ಮತ್ತು ತಂಡ, ಕಾವ್ಯ ರೇಖಾ ಜಿ ಪಿ, ಕೀರ್ತಿ ನಾಯಕ್, ಸುಗ್ಗಿ ಕುಣಿತ ಭೂಮಿಕಾ ಜಿ ಮತ್ತು ತಂಡ, ಏಕಪಾತ್ರ ಅಭಿನಯ ಅಮಿತ್, ಜನಪದ ನೃತ್ಯ ನಿತ್ಯಶ್ರೀ ಮತ್ತು ತಂಡ ಹಾಗೂ ಹರಿಪ್ರಿಯ ಮತ್ತು ತಂಡ ಪ್ರದರ್ಶನ ನೀಡಿದರು.
ಕಾಲೇಜಿನ ಪ್ರಾಂಶುಪಾಲರು ಪ್ರೊ ಅಶೋಕ್ ಕುಮಾರ್ ಸ್ವಾಗತಿಸಿದರು, ಜಾನಪದ ಉತ್ಸವದ ಸಂಚಾಲಕರು ಡಾ ನಂದಿನಿ ನಿರೂಪಿಸಿದರು, ಪ್ರೊ ಅಕ್ಷತಾ ಪಿ ಪೈ ವಂದನಾರ್ಪಣೆ ಮಾಡಿದರು.

ಭರತ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮಣ್, ಎಸ್.ಟಿ ಶ್ರೀನಿವಾಸ್, ಪ್ರೊ. ಟಿ ನಾರಾಯಣಪ್ಪ, ಉಪಾಧ್ಯಕ್ಷರು ಪ್ರೊ ಎನ್.ಎಸ್ ವಿಜಯ, ಕಾರ್ಯದರ್ಶಿ ಎಂ ಕೃಷ್ಣ ದಾಸ್, ಕ್ರೀಡಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರು ಟಿ ಆರ್ ವೆಂಕಟರೆಡ್ಡಿ, ಪ್ರೊ ಜ್ಯೋತಿ ಉಪಸ್ಥಿತರಿದ್ದರು.
