ಮಧ್ಯಪ್ರದೇಶ, ಮಾ.7: ಮಧ್ಯಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಜಗದೀಶ್ ದೇವಡಾ ಅವರನ್ನು ಶುಕ್ರವಾರ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್ ಬಾಲಾಜಿ ಭೇಟಿ ಮಾಡಿ ಚರ್ಚಿಸಿದರು.

ಈ ವೇಳೆ ಮಧ್ಯಪ್ರದೇಶ ಸರ್ಕಾರವು ಕರ್ನಾಟಕದ ಜಾನಪದ ಕಲೆಗಳ ವಿನಿಮಯ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಬಾಲಾಜಿ ಅವರು ಮನವಿ ಮಾಡಿದಾಗ ಡಿಸಿಎಂ ಸಂತೋಷದಿಂದ ಒಪ್ಪಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಉತ್ಸವಕ್ಕೆ ಆಮಂತ್ರಣ ನೀಡಲಾಯಿತು.

ಅದಕ್ಕೂ ಜಗದೀಶ್ ದೇವಡಾ ಅವರು
ಸಮ್ಮತಿ ಸುಚಿಸಿದ್ದು ತಮಗೆ ಬಹಳ ಸಂತಸ ವಾಯಿತೆಂದು ಡಾ. ಜಾನಪದ ಎಸ್ ಬಾಲಾಜಿ ತಿಳಿಸಿದ್ದಾರೆ.

ಮಧ್ಯಪ್ರದೇಶ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಾಕೇಶ್ ಶರ್ಮ, ಪತ್ರಕರ್ತ ಜಿತೇಂದ್ರ ಸೋಲಂಕಿ ಹಾಗೂ ಸಂಘದ ಪ್ರಮುಖರಾದ ಮದನ್ ಲಾಲ್ ರಾಥೋಡ್ ಈ ವೇಳೆ ಉಪಸ್ಥಿತರಿದ್ದರು.
