ಕರ್ನಾಟಕ ಸಾಂಸ್ಕೃತಿಕ ಪರಂಪರೆಉಳಿಸಿ ಬೆಳಸುವ ಕಾರ್ಯ ಮಾಡುತ್ತಿರುವ ಜಾನಪದ ಬಾಲಾಜಿ

Spread the love

ಭೋಪಾಲ್: ಭೂಪಲ್ ನಗರಕ್ಕೆ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿಯವರು ಆಗಮಿಸಿರುವುದು ಸಂತಸ ತಂದಿದೆ ಎಂದು ಮಧ್ಯ ಪ್ರದೇಶ್ ಜನ ಅಭಿಮಾನ್ಯ ಪರಿಷತ್ ಸಂಚಾಲಕ ರಾಕೇಶ್ ಶರ್ಮಾ ತಿಳಿಸಿದರು.

ಭೂಪಲ್ ನಗರದಲ್ಲಿ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಸ್ವಾಗತಿಸಿ ಮಾತನಾಡಿದ ಅವರು,ನೀವು ಬಂದಿರುವುದು ಎರಡು ರಾಜ್ಯಗಳ ಯುವ ಹಾಗು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ನಂಬಿಕೊಳ್ಳಲು ಮುಖ್ಯ ವೇದಿಕೆ ಆಗಿದೆ ಎಂದು ತಿಳಿಸಿದರು.

ಕರ್ನಾಟಕ ಸಾಂಸ್ಕೃತಿಕ ಪರಂಪರೆ ಬಹಳ ವಿಶೇಷವಾಗಿದೆ ಅದನ್ನು ಉಳಿಸಿ ಬೆಳಸುವ ಕಾರ್ಯ ಮಾಡುತ್ತಿರುವ ಬಾಲಾಜಿ ಅವರ ಕಾರ್ಯ ಭೋಪಾಲ್ ರಾಜ್ಯದಲ್ಲೂ ಅನುಕರಣೀಯ ಎಂದು ಹೇಳಿದರು.

ಸಿಹೋರ್ ಜಿಲ್ಲಾ ಮಾತ್ತ್ರುಭೂಮಿ ಪ್ರತಿನಿಧಿ ವಿನೋದ್ ಸೋನಿ ಅವರು ಮಾತನಾಡಿ ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಮಧ್ಯ ಭಾರತದ ಸರೋವರಗಳ ನಗರ
ಭೋಪಾಲ್ ಗೆ ಆಗಮಿಸಿ ನಿನ್ನೆ ಸ್ಥಳೀಯ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಯುವ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯ ಎಂದು ಸಂತಸ ವ್ಯಕ್ತಪಡಿಸಿದರು.

ವಿಶಾಲ್ ಪಟೇದರ್ ಮತ್ತಿತರರು ಅಭಿನಂದಿಸಿ ಗೌರವಿಸಿದರು.