ಜಮೀರ್ ರಾಜೀನಾಮೆಗೆ ಹೆಚ್‍.ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗ ಆಗ್ರಹ

Spread the love

ಮೈಸೂರು: ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರನ್ನು ಕರಿಯ ಎಂದು ರಾಜ್ಯ ಸಚಿವ ಜಮೀರ್ ಅಹಮದ್ ಖಾನ್ ಹೇಳಿರುವುದು ಸರಿಯಲ್ಲ, ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಹೆಚ್‍.ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗ ಒತ್ತಾಯಿಸಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಬೆಲವತ್ತ ರಾಮಕೃಷ್ಣ ಮತ್ತು ನಾಗರಾಧ್ಯಕ್ಷ ಕೆಆರ್ ಮಿಲ್ ಆನಂದ ಗೌಡ ಮತ್ತಿತರ ಪದಾಧಿಕಾರಿಗಳು ಜಮೀರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕುಮಾರಸ್ವಾಮಿಯವರಿಗೆ ಕರಿಯ ಎಂಬ ಪದ ಬಳಕೆ ಮಾಡಿರುವ ಜಮೀರ್ ಅವರಿಗೆ ತಮ್ಮ ಜನಾಂಗದ ಮಹಿಳೆಯರು ಧರಿಸುವ ಬುರ್ಖ ಯಾವ ಬಣ್ಣ ಗೊತ್ತಿಲ್ಲವೆ,ಅದು ಯಾವ ಬಣ್ಣ ಹೇಳಿ ಎಂದು ಪ್ರಶಿಸಿದ್ದಾರೆ.

ಜಮೀರ್ ಅಹಮದ್ ಅವರೇ ತಾವು ಚಾಮರಾಜಪೇಟೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಒಂದೊಂದು ರೂಪಾಯಿಯನ್ನು ಬೇಡಿ ತಮ್ಮನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದು ಯಾರು ಎಂದು ಬಹಿರಂಗವಾಗಿ ಹೇಳಿ ಎಂದು ಒತ್ತಾಯಿಸಿದ್ದಾರೆ.

ಎಚ್ ಡಿ ದೇವೇಗೌಡರ ಕುಟುಂಬ ಹಾಗೂ ಒಕ್ಕಲಿಗರ ಜನಾಂಗದ ಬಗ್ಗೆ ಮಾತನಾಡಬೇಕಾದರೆ ಎಚ್ಚರವಿರಲಿ, ಯಾವುದೇ ಸಮುದಾಯದ ಬಗ್ಗೆ ಹೀಗೆ ಕೀಳಾಗಿ ಮಾತನಾಡಬಾರದು ಎಚ್ಚರಿಕೆ ಇರಲಿ ಇದು ಹೀಗೆ ಮುಂದುವರಿದರೆ ಹೋರಾಟ ಶತಸಿದ್ಧ ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಮೊದಲ ಬಾರಿಗೆ ನಾಲ್ಕು ಪರ್ಸೆಂಟ್ ಮೀಸಲಾತಿ ಕೊಟ್ಟವರು ಎಚ್ ಡಿ ದೇವೇಗೌಡರು ಎಂಬಯದನ್ನು ಮರೆಯಬೇಡಿ.ಅಂತಹ ಕುಟುಂಬನ್ನೆ ಕೊಂಡುಕೊಳ್ಳುವ ಬಗ್ಗೆ ಮಾತನಾಡಿದ್ದೀರಿ ಇದನ್ನು ನಾವು ಖಂಡಿಸಿದ್ದೇವೆ ಎಂದು ಹೇಳಿದ್ದಾರೆ.

ಕೂಡಲೇ ಜಮೀರ್ ಕ್ಷಮೆ ಕೇಳುವುದರ ಜೊತೆಗೆ ರಾಜೀನಾಮೆಯನ್ನು ಕೊಡಬೇಕೆಂದು ಬೆಲವತ್ತ ರಾಮಕೃಷ್ಣ ಮತ್ತು ಆನಂದ ಗೌಡ ಆಗ್ರಹಿಸಿದ್ದಾರೆ.