ಜಂಬೂ ಸವಾರಿಯಲ್ಲಿ ಗಮನ ಸೆಳೆದ ಸ್ತಬ್ಧಚಿತ್ರಗಳು,ಜಾನಪದ ಕಲೆ

Spread the love

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಿಬಂದ ಸ್ತಬ್ಧಚಿತ್ರಗಳು,ಜಾನಪದ ಕಲಾತಂಡಗಳು ಈ ಬಾರಿ ಅತಿ ಹೆಚ್ಚು ಆಕರ್ಶಣೆಯಿಂದ ಕೂಡಿದ್ದವು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ- ಶಕ್ತಿ ಯೋಜನೆಯ ಯಶೋಗಾಥೆ, ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ವಿಜಯದ ರನ್ ವೇ ಭಾರತದ ಆಕಾಶಕ್ಕೆ ಎಚ್‌ಎಎಲ್‌ನ ಶಕ್ತಿ ಸ್ತಬ್ಧಚಿತ್ರ…..
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಿಂದ ಆತ್ಮನಿರ್ಭರ ಭಾರತವನ್ನು ಮುನ್ನಡೆಸುತ್ತಿದೆ ರಕ್ಷಣಾ ಚಲನಶೀಲತೆಯಲ್ಲಿ, ಭಾರತೀಯ ರೈಲ್ವೆ ಇಲಾಖೆಯಿಂದ ಚಿನಾಬ್ ಸೇತು ಹಾಗೂ ಪಂಬನ್ ಸೇತು, ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಭೋವಿ ಸಮುದಾಯದವರನ್ನು ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಮಾಡಲು ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳು, ಮಂಡ್ಯ ಜಿಲ್ಲೆಯಿಂದ ಸ್ವಾತಂತ್ರ‍್ಯ ಹೋರಾಟದ ದೀಪ-ಶಿವಪುರದ ಧ್ವಜ ಸತ್ಯಾಗ್ರಹ, ಚಿಕ್ಕಬಳ್ಳಾಪುರ ಜಿಲ್ಲೆಯ ಜ್ಞಾನಿ -ವಿಜ್ಞಾನಿಗಳ ನಾಡು, ನಗರಾಭಿವೃದ್ಧಿ ಇಲಾಖೆಯಿಂದ ಸ್ಮಾರ್ಟ್, ಶುದ್ದ ಕಾಳಜಿಯ ನಗರಗಳು, ಮೈಸೂರು ಮಹಾನಗರ ಪಾಲಿಕೆಯಿಂದ ಸ್ವಾಸ್ಥ್ಯ ಮತ್ತು ಸುಸ್ಥಿರ ಮೈಸೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಕುರಿತು ಮೆರವಣಿಗೆಯಲ್ಲಿ ಕಲಾ ತಂಡಗಳೊಂದಿಗೆ ಒಂದರ ಹಿಂದೆ ಒಂದರಂತೆ ಸಾಗಿ ಎಲ್ಲರ ಗಮನ ಸೆಳೆದವು.

ಧಾರವಾಡ ಜಿಲ್ಲೆಯಿಂದ ರಾಷ್ಟ್ರದ ತಯಾರಿಕಾ ಕೇಂದ್ರ ಗರಗ ಕಲಘಟಗಿ ಬಣ್ಣದ ತೊಟ್ಟಿಲು ಮತ್ತು ನವಲಗುಂದ ಜಮಖಾನ, ಉತ್ತರ ಕನ್ನಡ ಜಿಲ್ಲೆಯಿಂದ ರಾಣಿ ಚೆನ್ನಭೈರಾದೇವಿ, ಮಸಾಲೆ ರಾಣೆ ಬಾಗಲಕೋಟೆ ಜಿಲ್ಲೆಯಿಂದ ಕೂಡಲಸಂಗಮ ಮತ್ತು ಶಿಲ್ಪಕಲೆಗಳ ನಾಡು, ಕೊಪ್ಪಳ ಜಿಲ್ಲೆಯಿಂದ ಕಿನ್ನಾಳ ಕಲೆ, ಶಿವಮೊಗ್ಗ ಜಿಲ್ಲೆಯಿಂದ ಕೇದಾರೇಶ್ವರ ದೇವಸ್ಥಾನ, ಬಳ್ಳಿಗಾವಿ, ಬಳ್ಳಾರಿ ಜಿಲ್ಲೆಯಿಂದ ಸೆಪ್ಟೆಂಬರ್ ನಲ್ಲಿ ಸಂಡೂರು ನೋಡು, ವಿಜಯಪುರ ಜಿಲ್ಲೆಯಿಂದ ಶಿವನ ಪ್ರತಿಮೆ ಶಿವಗಿರಿ, ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲೆ ದೈವಾರಾಧನೆ ಹಾಗೂ ಸಾಂಪ್ರದಾಯಿಕ ಕ್ರೀಡೆ, ಕಲಬುರಗಿ ಜಿಲ್ಲೆಯಿಂದ ಶರಣಬಸವೇಶ್ವರ ಸಂಸ್ಥಾನ. ಮಾಹಾದಾಸೋಹಿ ಪೀಠ ಮತ್ತು ಬಹುಮನಿ ಸುಲ್ತಾನ ಸಾಮ್ರಾಜ್ಯ, ತುಮಕೂರು ಜಿಲ್ಲೆಯಿಂದ “ನವ್ಯ ಮತ್ತು ಪ್ರಾಚೀನ ಶಿಲ್ಪ ಕಲಾ ಸಂಕೀರ್ಣ ನಮ್ಮ ತುಮಕೂರು ಜಿಲ್ಲೆ”, ಉಡುಪಿ ಜಿಲ್ಲೆಯಿಂದ ಸ್ವಚ್ಛ ಉಡುಪಿ, ಕೊಡಗು ಜಿಲ್ಲೆಯಿಂದ ಕೊಡಗಿನ ಚಾರಣ ಪಥಗಳು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವತಿಯಿಂದ ಅಭೂತಪೂರ್ವ ಸಾಧನ,
ಹಾವೇರಿ ಜಿಲ್ಲೆಯಿಂದ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹದೇವ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಘಾಟಿ ಸುಬ್ರಮಣ್ಯ ದೇವಸ್ಥಾನ, ದೇವನಹಳ್ಳಿ ಕೋಟೆ ಮತ್ತು ಕೆಂಪೇಗೌಡರ ವಿಗ್ರಹ, ಚಿಕ್ಕಮಗಳೂರು ಜಿಲ್ಲೆಯಿಂದ ಭದ್ರಬಾಲ್ಯ ಯೋಜನೆ ಚಿಕ್ಕಮಗಳೂರು ಜಿಲ್ಲೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ -ಕರ್ನಾಟಕದಿಂದ ಡ್ರಗ್ಸ್ ಮುಕ್ತ ಕ್ಯಾಂಪಸ್ ಅಭಿಯಾನ, ಚನ್ನಪಟ್ಟಣ ಗೊಂಬೆ, ಮೈಸೂರು ಜಿಲ್ಲೆಯಿಂದ ಬದನವಾಳು ನೂಲುವ ಪ್ರಾಂತ್ಯ, ಬೆಂಗಳೂರು ನಗರ ಜಿಲ್ಲೆಯಿಂದ ಬ್ರಾಂಡ್ ಬೆಂಗಳೂರಿನತ್ತ ದಿಟ್ಟ ಹೆಜ್ಜೆ,ಚಾಮರಾಜನಗರ ಜಿಲ್ಲೆಯಿಂದ ಪ್ರಕೃತಿಯ ಸೌರ್ಹದತೆಯೊಂದಿಗೆ ಪ್ರಗತಿಯತ್ತ ಸಾಗೋಣ, ಬೆಳಗಾವಿ ಜಿಲ್ಲೆಯಿಂದ ಶ್ರೀ ಮಹಾಕಾಳಿ ಮಾಯಕ್ಕಾ ದೇವಿ ದೇವಸ್ಥಾನ ಚಿಂಚಲಿ, ಹಾಸನ ಜಿಲ್ಲೆಯಿಂದ ಗೊಮ್ಮಟೇಶ್ವರ – ಕಾಫಿ, ಬೀದರ್ ಜಿಲ್ಲೆಯಿಂದ ಬೀದರ ಕೊಟೆ, ದಾವಣಗೆರೆ ಜಿಲ್ಲೆಯಿಂದ ಮನೆ ಮನೆಗೆ ಗಂಗೆ, ಚಿತ್ರದುರ್ಗ ಜಿಲ್ಲೆಯಿಂದ ರಾಜವೀರ ಮದಕರಿ ನಾಯಕ, ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮದಿಂದ ಕರ್ನಾಟಕದ ಹೆಮ್ಮೆಯ ಸಂಕೇತ ಮೈಸೂರು ರೇಷ್ಮೆ, ಕೆ.ಎಂ.ಎಫ್ ನಿಂದ ನಂದಿನಿ ಹಾಲಿನ ಶುಭ್ರತೆ… ನೀಡಿದೆ ರೈತ ಪರಿವಾರಕ್ಕೆ ಭದ್ರತೆ, ಡಾ||ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟರ ಸಮಗ್ರ ಅಭಿವೃದ್ಧಿ – ನಮ್ಮ ಧ್ಯೇಯ…ಹೀಗೆ ಪ್ರತಿ ಜಿಲ್ಲೆಗಳಿಂದ ಆಗಮಿಸಿದ್ದ ಸ್ತಬ್ಧ ಚಿತ್ರಗಳು ಮನಸೂರೆಗೊಂಡವು.

ಇವುಗಳಲ್ಲದೆ ಮೆರವಣಿಗೆಯಲ್ಲಿ ಬಂದ ಜಾನಪದ ಕಲಾವಿದರ ವೇಷಭೂಷಣ,ಅವರ ಹಾವಾಬವಾವಕ್ಕೆ ಜನ ಮನಸೋತರು.