ಐತಿಹಾಸಿಕ ಸ್ತೋತ್ರ ಸಮರ್ಪಣೆ ಪಾರಾಯಣ ಸಂಪನ್ನ

ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಸಮ್ಮುಖದಲ್ಲಿ ನಡೆದ ಐತಿಹಾಸಿಕ ಸ್ತೋತ್ರ ಸಮರ್ಪಣೆ ಪಾರಾಯಣ ವೈಭವವಾಗಿ ಸಂಪನ್ನಗೊಂಡಿತು.

ಈ ಕಾರ್ಯಕ್ರಮದ ಸ್ತುತಿ ಶಂಕರದಲ್ಲಿ ಭಾಗವಹಿಸಿ ಕಲ್ಯಾಣ ವೃಷ್ಟಿ ಸ್ತವ, ಶಿವ ನಕ್ಷತ್ರ ಮಾಲಾ ಸ್ತೋತ್ರ ಹಾಗೂ ಲಕ್ಷ್ಮೀ ಕರಾವಲಂಬ ಸ್ತೋತ್ರ ಗಳನ್ನು ಮೈಸೂರಿನ ಮೂಕಾಂಬಿಕಾ ಸತ್ಸಂಗ ಬಳಗದ ವತಿಯಿಂದಲೂ ಸಹ ಸಮರ್ಪಣೆ ಮಾಡಲಾಯಿತು.

ಸತ್ಸಂಗದ ಅಧ್ಯಕ್ಷರಾದ ಶುಭಾ ಅರುಣ್ ಅವರ ನೇತೃತ್ವದಲ್ಲಿ ಒಂದು ವರ್ಷದಿಂದ ನಿರಂತರ ಅಭ್ಯಾಸ ಮಾಡಿದ ತಂಡ ಕಾರ್ಯಕ್ರಮ ಮುಗಿದ ಮೇಲೆ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸತ್ಸಂಗ ಪ್ರಮುಖರಾದ ಶುಭಾ ಅರುಣ್ ಅವರು ಶಂಕರಾಚಾರ್ಯ ವಿರಚಿತ ಸ್ತೋತ್ರಗಳು ಪಠಿಸುವುದು ಮನಸ್ಸಿಗೆ ಸದಾ ನೆಮ್ಮದಿ ನೀಡುತ್ತದೆ ಹಾಗೂ ಆ ದೇವರೊಂದಿಗೆ ನಾವು ನೇರ ಸಂಪರ್ಕದಲ್ಲಿದ್ದೇವೆ ಎಂಬ ಭಾವನೆ ಮೂಡುತ್ತದೆ ಎಂದು ಹೇಳಿದರು.

ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ, ವಿಷ್ಣು ಸಹಸ್ರನಾಮ ಪಾರಾಯಣ ಇವು ನಮ್ಮ ಆತ್ಮದ ಉನ್ನತಿಗಾಗಿ ಶ್ರೀ ಭಗವತ್ಪಾದರು ನಮಗೆ ತಿಹಿಸಿದ್ದಾರೆ. ಇದರೊಂದಿಗೆ ಈಗ ಸ್ತೋತ್ರ ತ್ರಿವೇಣಿ ಗಳು ಸೇರಿ ನಮ್ಮ ಭಗವದ್ಭತಿಯು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೂಕಾಂಬಿಕಾ ಸತ್ಸಂಗ ಬಳಗದ ಪೂಜಾ ಪುನೀತ್, ರಚನಾ ಪಾರ್ಶ್ವನಾಥ, ಶೈಲಜಾ ರಮೇಶ್, ಉಮಾ ಪುಟ್ಟರಾಜು, ವರಲಕ್ಷ್ಮಿ ನಾಗಭೂಷಣ್, ರೇಖಾ ಆರಾದ್ಯ ಸೇರಿದಂತೆ ಸತ್ಸಂಗದ ಹಲವು ಸದಸ್ಯರು ಪಾಲ್ಗೊಂಡಿದ್ದರು.