ಐಟಿ ರಸಪ್ರಶ್ನೆ ಕಾರ್ಯಕ್ರಮ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಕ್ಕೆ ನಾಂದಿ-ದಿನೇಶ್

Spread the love

ನಂಜನಗೂಡು: ಗ್ರಾಮೀಣ ಐಟಿ ರಸಪ್ರಶ್ನೆ ಕಾರ್ಯಕ್ರಮವು ಗ್ರಾಮೀಣ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ-ಜ್ಞಾನಕ್ಕೆ ನಾಂದಿಯಾಗುವುದು ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿ.ಆರ್‌.ದಿನೇಶ್ ಹೇಳಿದರು.

ನಂಜನಗೂಡು ತಾಲೂಕು ಮಟ್ಟದ ಗ್ರಾಮೀಣ ಐಟಿ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ,ಮಾತನಾಡಿದ ಅವರು,
ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಮೂಲಕ ಇಂತಹ ಕ್ವಿಜ್-ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜ್ಞಾನ, ತಯಾರಿ, ಪರಿಣಯಶೀಲತೆಯನ್ನು ಎತ್ತಿಹಿಡಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲ ನಾಲ್ಕು ಬಹುಮಾನಗಳನ್ನು ಕ್ರಮವಾಗಿ ಸಿಂಧು.ಎಸ್. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ, ಮತ್ತು ಆರ್ .ಗಣೇಶ್ ಎರಡನೇ ಹಾಗೂ ನಾಲ್ಕನೇ ಸ್ಥಾನವನ್ನು ಅರ್ಜುನ್ ಕಾರ್ಮೇಲ್ ಪ ಪೂ ಕಾಲೇಜು ಮತ್ತು ಸಿಟಿಜನ್ ಪ ಪೂ ಕಾಲೇಜಿನ ಬಿಂದೂಶ್ರೀ ಮೂರನೇ ಸ್ಥಾನವನ್ನು ಪಡೆದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ,ಡಾ.ಟಿ.ಕೆ ರವಿ, ಚಿನ್ನಸ್ವಾಮಿ, ಆಯಿಶಾ, ಹೆಚ್.ಕೆ.ಸ್ವಾಮಿಗೌಡ, ಸಹನಾ, ನಾಗರಾಜು ಮತ್ತಿತರರು ಹಾಜರಿದ್ದರು.