ತಾಂತ್ರಿಕ ಶಿಕ್ಷಣದಲ್ಲಿ ಪರಿಣತಿ ಹೊಂದಿ ದೇಶದ ಅಭಿವೃದ್ಧಿಗೆ ಸಹಕರಿಸಿ:ವಿದ್ಯಾರ್ಥಿಗಳಿಗೆ ಇಸ್ರೋ ವಿಜ್ಞಾನಿ ಕರೆ

Spread the love

ಮೈಸೂರು: ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದಲ್ಲಿ ಹೆಚ್ಚಿನ ಪರಿಣತಿ ಹೊಂದಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಇಸ್ರೋ ವಿಜ್ಞಾನಿ ಡಾ. ರಾಘವೇಂದ್ರ ಬಿ ಕುಲಕರ್ಣಿ ಸಲಹೆ ನೀಡಿದರು.

ಮೈಸೂರಿನ ದ್ವಿತೀಯ ಜೆ ಎಸ್ ಎಸ್ ಪಾಲಿಟೆಕ್ನಿಕ್ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ವಿದ್ಯಾರ್ಥಿಗಳ ಕುರಿತು ಮಾತನಾಡಿದರು.

ಇಸ್ರೋದಂತ ಸಂಸ್ಥೆಗೆ ತಾಂತ್ರಿಕ ಶಿಕ್ಷಣದಿಂದ ಇನ್ನು ಹೆಚ್ಚಿನ ಕೌಶಲ್ಯವುಳ್ಳ ಇಂಜಿನಿಯರುಗಳು ಬೇಕಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು 14 ರ್‍ಯಾಂಕ್ ಗಳನ್ನು, ಮೆಕ್ಯಾನಿಕಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಮುಂತಾದ ವಿಭಾಗಗಳ ವಿದ್ಯಾರ್ಥಿಗಳಿಗೆ ಪದಕ ಹಾಗೂ ಘಟಿಕೋತ್ಸವದ ಪ್ರಮಾಣ ಪತ್ರದೊಂದಿಗೆ ವಿತರಿಸಲಾಯಿತು.

ಇದೇ ವೇಳೆ ಹೆಚ್ಚಿನ ಫಲಿತಾಂಶವನ್ನು ನೀಡಿದ ಪಾಲಿಟೆಕ್ನಿ ಉಪನ್ಯಾಸಕರುಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಬೆಂಗಳೂರು ತಾಂತ್ರಿಕ ಶಿಕ್ಷಣ ಇಲಾಖೆಯ
ಮಂಜುಳಾ. ಎಸ್ , ಕಾಲೇಜು ಶಿಕ್ಷಣ ವಿಭಾಗ, ಜೆ ಎಸ್ ಎಸ್ ಮಹಾವಿದ್ಯಾಪೀಠಧ ಸಹ ನಿರ್ದೇಶಕ ನಿರಂಜನ ಮೂರ್ತಿ,ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ ಎಸ್ ಭಕ್ತವತ್ಸಲ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.