ಮೈಸೂರು: ಈ ಬಾರಿಯ ದಸರಾ ಶ್ವಾನ ಪ್ರದರ್ಶನದಲ್ಲಿ ನಗರದ ಸಿದ್ದಾರ್ಥ ಬಡಾವಣೆಯ ಸುಜಾತ ಅಶ್ವಿನ್ ಅವರ ಟಾಯ್‌ಪೂಡಲ್ ತಳಿಯ ಐರಿಸ್ ಶ್ವಾನ ಪ್ರಥಮ ಸ್ಥಾನ ಗಳಿಸಿತು.
ಕಳೆದ ಮೂರು ವರ್ಷಗಳಿಂದ ದಸರಾ ಶ್ಚಾನ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದಿರುವ ಹೆಗ್ಗಳಿಕೆ ಈ ಶ್ವಾನಕ್ಕಿದೆ.
ಈರೋಪ್ ಮೂಲದಿಂದ ದೆಹಲಿಯ ಬ್ರೀಡರ್ ಮೂಲಕ ತರಿಸಿಕೊಳ್ಳಲಾದ ಈ ತಳಿಯು ಬುದ್ದಿವಂತ ಶ್ವಾನವೆಂದೆ
ಜನಪ್ರಿಯವಾಗಿದೆ.
ರಾಜ್ಯಸಭಾ ಸದಸ್ಯರು ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಪ್ರಶಸ್ತಿ ಪ್ರದಾನ ಮಾಡಿ ಶ್ವಾನವನ್ನು ಅಪ್ಪಿ ಮುದ್ದಾಡಿ ಖುಷಿ ಪಟ್ಟರು.
ಕೆಎಂಪಿಕೆ ಚಾರಿಟಬಲ್
ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,
ಕರ್ನಾಟಕ ಪಶು ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ವೈ ಡಿ ರಾಜಣ್ಣ, ಉಪವಿಶೇಷಾಧಿಕಾರಿ
ಡಾ. ಕೃಷ್ಣಂರಾಜು, ಉಪನಿರ್ದೆಶಕ ಡಾ ನಾಗರಾಜು ಉಪಸ್ಥಿತರಿದ್ದರು.