ಮಂತ್ರಾಲಯ: ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆದ
ಸಮಾರಂಭದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಅಂತರಾಜ್ಯ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ತೆಲಂಗಾಣ, ಆಂಧ್ರ ಪ್ರದೇಶ್, ಗೋವಾ, ಚಿಕ್ಕಮಗಳೂರು ವತಿಯಿಂದ ಅಂತಾ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ಜರುಗಿತು.
ಪೂಜ್ಯ ಶ್ರೀ ಸುಭುದೇಂದ್ರ ತೀರ್ಥ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಡಾ ಜಾನಪದ ಎಸ್ ಬಾಲಾಜಿ ಯವರ 30 ವರ್ಷಗಳ ಜಾನಪದ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಅಂತ ರಾಜ್ಯ ಜಾನಪದ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ ಮಹೇಶ್ ಜೋಶಿ, ಅಯೋಧ್ಯ ರಾಮ ಲಲ್ಲಾ ಶಿಲ್ಪಿ ಡಾ ಅರುಣ್ ಯೋಗಿರಾಜ್, ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ,
ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿ ಡಾ ಬಿ ಎಂ ಪಟೇಲ್ ಪಾಂಡು,
ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಅಂಜನ್ ಕುಮಾರ್, ತೆಲಂಗಾಣ ರಾಜ್ಯ ಅಧ್ಯಕ್ಷ ಡಾ ಗುಡಗುಂಟಿ ವಿಟ್ಟಲ್ ಜೋಶಿ, ಮಹಾರಾಷ್ಟ್ರ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ, ಗೋವಾ ಅಧ್ಯಕ್ಷ ಡಾ ಸಿದ್ದಣ್ಣ ಸಂಗಣ್ಣ ಮೇಟಿ, ಚಿಕ್ಕಮಗಳೂರು ಅಧ್ಯಕ್ಷ ಸೂರಿ ಶ್ರೀನಿವಾಸ್, ರಾಯಚೂರು ಜಿಲ್ಲಾ ಕಾರ್ಯದರ್ಶಿ ದಂಡಪ್ಪ ಬಿರಾದರ್ ಅವರ ಸಮ್ಮುಖದಲ್ಲಿ ಡಾ.ಬಾಲಾಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.