ಮೈಸೂರು: ಮೈಸೂರಿನ ಸಿದ್ದಾರ್ಥ ನಗರದ ನಿವಾಸಿ ಅಲೋಕ್ ಆರ್ ಜೈನ್ ಅವರು ಅಂತರಾಷ್ಟ್ರೀಯ ವಿಶೇಷ ಚೇತನರ ಸ್ನೂಕರ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 14ರಂದು ವರ್ಲ್ಡ್ ಫೂಲ್ ಅಸೋಸಿಯೇಷನ್ ಅಮೆರಿಕದ ಲಾಸ್ ಎಂಜಲೀಸ್ ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ವಿಶೇಷ ಚೇತನರ ಸ್ನೂಕರ್ ಸ್ಪರ್ಧೆಗೆ ಭಾರತದ ಪ್ರತಿನಿಧಿಯಾಗಿ 7 ಜನ ಸ್ಪರ್ಧಿಸುತ್ತಿದ್ದಾರೆ.
ಅದರಲ್ಲಿ 5 ಮಂದಿ ಕರ್ನಾಟಕದವರು
ಅದರಲ್ಲೂ ಮೈಸೂರಿನ ಅಲೋಕ್ ಆರ್ ಜೈನ್ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.
ಅಲೋಕ್ ಆರ್.ಜೈನ್ ಅವರಿಗೆ ಪಾತಿ ಫೌಂಡೇಶನ್ ವತಿಯಿಂದ ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಶುಭ ಕೋರಲಾಯಿತು.
ಈ ವೇಳೆ ಮಾತನಾಡಿದ ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮೈಸೂರಿನ ಹುಡುಗ ಸ್ಪರ್ಧಿಸಿರುತ್ತಿರುವುದು ನಮ್ಮ ಮೈಸೂರಿನವರಿಗೆ
ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ವಿಶೇಷ ಚೇತನರು ತಮ್ಮ ನ್ಯೂನ್ಯತೆ ಮೆಟ್ಟಿ ನಿಂತು, ಸಾಧನೆಗಳ ಹಾದಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ,ಯಾವುದೇ ಸಾಧನೆ ಮಾಡಲು ಮನಸ್ಸು ಗಟ್ಟಿಯಾಗಿರ ಬೇಕು. ಆ ನಿಟ್ಟಿನಲ್ಲಿ ವಿಕಲಚೇತನರ ಸಾಧನೆಗೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ. ವಿಶೇಷ ಮಕ್ಕಳು ಹಾಗೂ ವಿಕಲಚೇತನರು ಮಾಡುವ ಸಾಧನೆಯು ಎಲ್ಲಕ್ಕಿಂತ ಮಿಗಿಲಾದ ಸಾಧನೆಯಾಗಿದೆ ಎಂದು ಬಣ್ಣಿಸಿದರು.
ಈ ವೇಳೆ ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಜೆಡಿಎಸ್ ಕಾರ್ಯದಕ್ಷ ಪ್ರಕಾಶ್ ಪ್ರಿಯ ದರ್ಶನ್, ಎಸ್ ಎನ್ ರಾಜೇಶ್,ಆಲನಹಳ್ಳಿ ಎಂ ಎನ್ ಚೇತನ್ ಗೌಡ,ಕಾಂಗ್ರೆಸ್ ಯುವ ಮುಖಂಡ ರವಿಚಂದ್ರ, ಬಿಜೆಪಿ ಯುವ ಮುಖಂಡ ಸಚಿನ್ ನಾಯಕ್,ಗಗನ್ ದೀಪ್, ಮಹಾನ್ ಶ್ರೇಯಸ್ ಮತ್ತಿತರರು ಹಾಜರಿದ್ದರು.