ಮೈಸೂರು: ಫೆಬ್ರವರಿ 1ಮತ್ತು 2ನೇ ತಾರೀಖಿನಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲದ ಆವರಣದಲ್ಲಿರುವ ಕಾವೇರಿ ಮತ್ತು ನಳ ಸಭಾಂಗಣದಲ್ಲಿ ಅಂತರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಮೈಸೂರು ಸಿನಿಮಾ ಸೊಸೈಟಿ ಮತ್ತು ಭಾರತೀಯ ಚಿತ್ರ ಸಾಧನದ ಸಹಯೋಗದೊಂದಿಗೆ ಈ ಸಮಾರಂಭ ನಡೆಯಲಿದ್ದು,ಇಂದು ಇದರ ಪೋಸ್ಟರ್ ಅನ್ನು ಸಮಿತಿಯ ಕಾರ್ಯದರ್ಶಿ ಪದ್ಮವಾತಿ ಭಟ್ ಬಿಡುಗಡೆ ಮಾಡಿದರು.
ಉದ್ಘಾಟನಾ ಕಾರ್ಯಕ್ರಮವನ್ನು ಖ್ಯಾತ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ, ಬರಹಗಾರ ಮನೇಕ್ ಪ್ರೇಮಚಂದ್ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಶರಣಪ್ಪ ಹಲಸೆ ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪೃಥ್ವಿ ಕೊನನೂರ್,ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀ ವತ್ಸ,ಹಾಗೂ ಇನ್ನಿತರ ಶಾಸಕರು ಉಪಸ್ಥಿತರಿರುವರು.
ಚಿತ್ರೋತ್ಸವಕ್ಕೆ ಪ್ರಪಂಚದಾದ್ಯಂತ 109 ದೇಶಗಳಿಂದ 3123 ಕಿರು ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ.
ಈ ಚಿತ್ರಗಳಲ್ಲಿ ಆಯ್ಕೆಯಾದ ಸಿನಿಮಾಗಳಿಗೆ 26 ವರ್ಗಗಳ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಭಾರತದಿಂದ 985, ಇರಾನ್,ಇರಾನ್,ಪ್ರಾನ್ಸ್, ಇಟಲಿ,ಜರ್ಮನಿ,ರಷ್ಯಾ ಗಳಿಂದ 42 138, 5 137, 108, ದೇಶಗಳಿಂದ 3123 ಸಿನಿಮಾಗಳು ಬಂದಿವೆ.
ಕನ್ನಡದ ಒಟ್ಟು 73 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಸೇರಿವೆ.ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಡ.ಎಲ್ ಮುರುಗನ್ ಅವರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಯೋಜಕ ಚೇತನ ಜಿ.ಅರ್.,ಸದಸ್ಯರುಗಳಾದ ಜೋಗಿಮಂಜು,ಸೀಮಾ ಬುರುಡೆ,ವೇಣುಗೋಪಾಲ್ ಹಾಜರಿದ್ದರು.